ಮಂಗಳೂರು: ಸೌದಿಯಲ್ಲಿ ಅಪಘಾತ, ಉಳ್ಳಾಲದ ಯುವಕ ಸಾವು

0
41

ಉಳ್ಳಾಲ: ಸೌದಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್ ನಗರದ ನಿವಾಸಿ ಯುವಕನೊಬ್ಬ ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ. ಮೃತರನ್ನು ಮಿಲ್ಲತ್ ನಗರ ನಿವಾಸಿ ಮೊಹಮ್ಮದ್ ಅವರ ಪುತ್ರ ಅಬ್ದುಲ್ ರಾಝಿಕ್ (27) ಎಂದು ಗುರುತಿಸಲಾಗಿದೆ.

ಕೆಲಸದ ನಿಮಿತ್ತ ಬಸ್‌ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೊಹಮ್ಮದ್ ಅವರ ಕೊನೆಯ ಪುತ್ರ ಆಗಿರುವ ರಾಝಿಕ್ ಸಿವಿಲ್ ಇಂಜಿನಿಯರ್ ಪದವಿ ಪಡೆದ ಬಳಿಕ ವಿದೇಶಕ್ಕೆ ತೆರಳಿದ್ದರು. ಜುಬೈಲ್‌ನಲ್ಲಿ ಪೋಲಿಟೆಕ್ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡ ಅಬ್ದುಲ್ ಕಳೆದ ಜುಲೈ 11 ರಂದು ಊರಿಗೆ ಬಂದಿದ್ದರು. ಒಂದು ತಿಂಗಳ ರಜೆ ಮುಗಿಸಿ ಆಗಸ್ಟ್ 15 ರಂದು ಎರಡನೇ ಬಾರಿ ವಿದೇಶಕ್ಕೆ ತೆರಳಿದ್ದರು.

ಸೌದಿ ಅರೇಬಿಯಾದ ಪೋಲಿಟೆಕ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ಸೆ. 14ರ ಭಾನುವಾರ ಸಂಜೆ ರಾತ್ರಿ ಪಾಳಿ ಕೆಲಸಕ್ಕೆಂದು ಬಸ್‌ನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ. ಅಬ್ದುಲ್ ಸಂಚರಿಸುತ್ತಿದ್ದ ಬಸ್‌ಗೆ ಇನ್ನೊಂದು ಬಸ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಝಿಕ್ ಅವರ ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಅನಾರೋಗ್ಯ ನಿಮಿತ್ತ ಈ ಹಿಂದೆ ಮೃತಪಟ್ಟಿದ್ದರು ಎಂದು ಕುಟುಂಬದಸ್ಥರು ತಿಳಿಸಿದ್ದಾರೆ.

Previous articleಬೆಂಗಳೂರು: 50 ಪ್ರಯಾಣಿಕರಿದ್ದ ಬಿಎಂಟಿಸಿ ಬಸ್‌ಗೆ ಬೆಂಕಿ
Next articleಮಂಗಳೂರು: ಮೀನುಗಾರಿಕಾ ದೋಣಿ ಪಲ್ಟಿ

LEAVE A REPLY

Please enter your comment!
Please enter your name here