ಬೆಂಗಳೂರು ನಗರದಲ್ಲಿವೆ 1.2 ಕೋಟಿ ಸ್ವಂತ ವಾಹನಗಳು!

0
72

ಬೆಂಗಳೂರು: ಬೆಂಗಳೂರು ನಗರದಲ್ಲಿ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗುತ್ತಿದೆ. ಪ್ರತಿನಿತ್ಯ 2000 ವಾಹನ ಮಾರಾಟವಾಗುತ್ತಿದೆ. ನಗರದ ಟ್ರಾಫಿಕ್ ಸಮಸ್ಯೆ ತಲೆನೋವು ಹೆಚ್ಚಾಗುತ್ತಲೇ ಇದೆ.

ರಾಜಧಾನಿಯಲ್ಲಿ ಸ್ವಂತ ವಾಹನ ಹೊಂದುವವರ ಸಂಖ್ಯೆ ಏರುಗತಿಯಲ್ಲಿ ಸಾಗುತಲಿದ್ದು, ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ವಾಹನಗಳ ಖರೀದಿ ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ ಮೂರು ಲಕ್ಷ ಹೊಸದಾಗಿ ಖಾಸಗಿ ವಾಹನಗಳು ನಗರದ ರಸ್ತೆಗಳಿದ್ದು, ಇದರಿಂದಾಗಿ ಸಂಚಾರ ದಟ್ಟಣೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ನಗರ ಭಾಗದಲ್ಲಿ ತಮ್ಮದೇ ಆದ ಒಂದು ಸ್ವಂತ ವಾಹನ ಹೊಂದಬೇಕು ಎಂಬ ಹಂಬಲ ಕೆಲವರದ್ದಾದರೇ, ಮಾರುಕಟ್ಟೆಗೆ ಬರುವ ಹೊಸ ವಾಹನಗಳು ತಮ್ಮ ಮನೆಯ ಪಾರ್ಕಿಂಗ್‌ನಲ್ಲಿ ನಿಲ್ಲಬೇಕು ಎನ್ನುವುದು ಇನ್ನು ಕೆಲವರ ಹಂಬಲವಾಗಿದೆ. ಬೆಂಗಳೂರಿನಂತ ಮಹಾ ನಗರದಲ್ಲಿಯಂತೂ ಒಟ್ಟಾರೆ ಜನಸಂಖ್ಯೆಯ ಶೇ.95ಕ್ಕಿಂತ ಹೆಚ್ಚಿನ ಜನರ ಬಳಿ ಒಂದು ವಾಹನಗಳಿವೆ ಎಂಬುದು ಇತ್ತೀಚಿನ ವರದಿಗಳಲ್ಲಿ ತಿಳಿದುಬಂದಿದೆ.

2025ರ ಜನವರಿ, ಜೂನ್ ವೇಳೆಗೆ ರಾಜಧಾನಿಯಲ್ಲಿ 1.4 ಕೋಟಿ ಜನಸಂಖ್ಯೆಯಿದ್ದು, 23 ಲಕ್ಷ ಕಾರು, 75 ಲಕ್ಷ ಬೈಕ್ ಒಳಗೊಂಡಂತೆ ಸುಮಾರು 1.23 ಕೋಟಿ ವಾಹನಗಳು ನೋಂದಣಿಯಾಗಿವೆ. ಸಾರಿಗೆ ಇಲಾಖೆ ಮಾಹಿತಿ ಪ್ರಕಾರ ಜೂನ್‌ನಲ್ಲೇ ಹೊಸದಾಗಿ 49,620 ಖಾಸಗಿ ವಾಹನಗಳು ನೋಂದಣಿಯಾಗಿದ್ದರೆ, ಪ್ರತಿನಿತ್ಯ ಸುಮಾರು 2 ಸಾವಿರಕ್ಕೂ ಹೆಚ್ಚು ವಾಹನಗಳು ಮಾರಾಟವಾಗುತ್ತಿವೆ ಎಂದು ತಿಳಿದು ಬಂದಿದೆ.

ಪ್ರಸ್ತುತ ನಗರದಲ್ಲಿ 6,851 ಬಿಎಂಟಿಸಿ ಬಸ್‌ಗಳು, ಹಳದಿ ಮಾರ್ಗ ಸೇರಿದಂತೆ 3 ಮಾರ್ಗದಲ್ಲಿ 42ಕ್ಕೂ ಹೆಚ್ಚಿನ ಮೆಟ್ರೋ ರೈಲುಗಳು ಸಾರ್ವಜನಿಕರ ಸಂಚಾರಕ್ಕೆ ಮೀಸಲಾಗಿವೆ.ಬಿಎಂಟಿಸಿಯಲ್ಲಿ ದೈನಂದಿನವಾಗಿ 38.4 ಲಕ್ಷ, ಮೆಟ್ರೋ ರೈಲಿನಲ್ಲಿ 12.5ಕ್ಕಿಂತ ಹೆಚ್ಚು ಜನರು ಸಂಚರಿಸುತ್ತಿದ್ದರೂ ಈ ರೀತಿಯ ಖಾಸಗಿ ವಾಹನಗಳ ಹೊಂದುವವರ ಸಂಖ್ಯೆ ಹೆಚ್ಚಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇಷ್ಟೆಲ್ಲ ಹೊರತು ಪಡಿಸಿ ಆಟೋ ರಿಕ್ಷಾ, ಟ್ಯಾಕ್ಸಿಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿಲ್ಲ.

ಈ ರೀತಿ ವಾಹನ ಖರೀದಿ ಭರಾಟೆ ಹೆಚ್ಚಾಗಿರುವುದಕ್ಕೆ ಹಲವು ಕಾರಣಗಳಿವೆ. ಹೆಚ್ಚುತ್ತಿರುವ ತಲಾದಾಯ ಒಂದೆಡೆಯಾದರೆ, ಅದಕ್ಕಿಂತ ಮುಖ್ಯವಾಗಿ ಸರಳೀಕೃತಗೊಂಡ ಸಾಲ ಸೌಲಭ್ಯಗಳು. ಈ ಹಿಂದೆ ವಾಹನಕೊಳ್ಳಲು ಸಾಲ ಅಷ್ಟು ಸುಲಭವಾಗಿ ಲಭ್ಯವಿರಲಿಲ್ಲ. ಆದರೀಗ ವಾಹನ ಕೊಳ್ಳಲು ಇಎಂಐ ಎನ್ನುವ ಸಾಲ ಸೌಲಭ್ಯದಿಂದ ಪ್ರತಿಯೊಬ್ಬರ ವಾಹನ ಕೊಳ್ಳುವ ಕನಸನ್ನು ನನಸಾಗಿಸಿಕೊಳ್ಳಬಹುದು.

ಶೇ.100 ರಷ್ಟು ವಾಹನ ಖರೀದಿದಾರರಲ್ಲಿ ಶೇ.80 ರಷ್ಟು ಜನ ಸಾಲದ (ಇಎಂಐ) ಮೂಲಕ ವಾಹನ ಖದೀದಿಸುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ನಗರ ರಸ್ತೆಗಳ ಸಾಮರ್ಥ್ಯಮಟ್ಟಕ್ಕಿಂತ ಹೆಚ್ಚಿನ ವಾಹನಗಳು ದಿನನಿತ್ಯ ರಸ್ತೆಗಿಳಿಯುತ್ತಿದ್ದು, ಹೆಚ್ಚಿನ ರೀತಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಸಂಚಾರ ಪೊಲೀಸರ ವರದಿ ಪ್ರಕಾರ ಜೂನ್‌ನಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಉಂಟಾಗಿದೆ. ಸರಾಸರಿ ದೈನಂದಿನ ವಾಹನ ದಟ್ಟಣೆಯ ಉದ್ದ 189.6 ಕಿ.ಮೀ. ಆಗಿದ್ದು, ಜೂ.11 ರಂದು ತಿಂಗಳ ಅತಿ ಹೆಚ್ಚು ಟ್ರಾಫಿಕ್ ಜಾಮ್ ಕಂಡು ಬಂದಿದೆ.

Previous articleಸಂಪಾದಕೀಯ: ಬಫರ್ ವಲಯ ಕಡಿತ ಕೆರೆಕಟ್ಟೆಗಳ ರಕ್ಷಣೆಗೆ ಕುತ್ತು
Next articleದರ್ಶನ್ ನಮ್ಮ ಜೈಲಿಗೆ ಕಳಿಸಬೇಡಿ: ಎಲ್ಲ ಜಿಲ್ಲಾ ಜೈಲಾಧಿಕಾರಿಗಳ ವರಾತ

LEAVE A REPLY

Please enter your comment!
Please enter your name here