ಬೆಂಗಳೂರಿನ ರಸ್ತೆ ಗುಂಡಿಗಳ ಗದ್ದಲ ನೆರೆಯ ರಾಜ್ಯಕ್ಕೂ ಕೇಳಿಸಿದ್ದು, ಈ ಕುರಿತಂತೆ ಆಂಧ್ರ ಸಚಿವ ನಾರಾ ಲೋಕೇಶ್ ಅವರೂ ಸಹ ‘ಮೊದಲು ರಸ್ತೆ ಗುಂಡಿ ಮುಚ್ಚಿ’ ಎಂದು ಟ್ವಿಟ್ ಮೂಲಕ ರಾಜ್ಯ ಸರ್ಕಾರವನ್ನು ಕೆಣಕಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಹೂಡಿಕೆ ಮಾಡಿರುವ ಉದ್ಯಮಿಗಳನ್ನು ನೆರೆಯ ರಾಜ್ಯಗಳು ಭೇಟೆಯಾಡಲು ತರಹೇವಾರಿ ತಯಾರಿ ನಡೆಸುತ್ತಿದ್ದು, ಇಲ್ಲಿನ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಿ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳ ಮನವೊಲಿಸಲು ಮುಂದಾಗುತ್ತಿದ್ದಾರೆ.
ಆಂಧ್ರಪ್ರದೇಶ ಸರ್ಕಾರವು ಬೆಂಗಳೂರಿನ ಉದ್ಯಮಗಳು ಹಾಗೂ ಹೂಡಿಕೆದಾರರನ್ನು ಆಕರ್ಷಿಸುವುದಕ್ಕೆ ಸರ್ಕಸ್ ಮಾಡುತ್ತಿದ್ದು, ಪ್ರತಿ ಬಾರಿಯೂ ರಸ್ತೆಗುಂಡಿ ಅಸ್ತ್ರ ಬಳಸುತ್ತಿದೆ ಆದರೂ ಸಹ ರಾಜ್ಯ ಸರ್ಕಾರ ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗುತ್ತಿಲ್ಲ.
ಇದೀಗ ಆಂಧ್ರ ಸಚಿವ ನಾರಾ ಲೋಕೇಶ್ ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ‘ಬೆಂಗಳೂರು ಅಭಿವೃದ್ಧಿ ಮಾಡಲು ಮೊದಲು ರಸ್ತೆ ಗುಂಡಿಗಳನ್ನು ಸರಿಪಡಿಸಿ’ ಎಂದು ಹೇಳಿದ್ದು, ಈ ಹೇಳಿಕೆಯಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ಟ್ವಿಟ್ ವಾರ್ ಶುರುವಾಗಿದೆ.
ನಗರದಲ್ಲಿನ ಹದಗೆಟ್ಟ ಈ ರಸ್ತೆಗಳ ಕುರಿತು ಹೋದ ಉದ್ಯಮಿಗಳು ಹಾಗೂ ಹೂಡಿಕೆದಾರರು, ರಸ್ತೆ ಗುಂಡಿ ಸರಿಪಡಿಸದಿದ್ದರೆ, ಬೆಂಗಳೂರು ತೊರೆಯುವ ಬಗ್ಗೆ ಅಸಮಾಧಾನ ಕಡಿಮೆ ಅಂತರದಲ್ಲಿರುವ ಆಂಧ್ರ ಪ್ರದೇಶದ ಅನಂತಪುರಕ್ಕೆ ಬನ್ನಿ ಎಂದು ಟ್ವಿಟ್ ಮೂಲಕ ಆಹ್ವಾನ ನೀಡಿದ್ದರು. ಈ ಹೇಳಿಕೆ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನಾರಾ ಲೋಕೇಶ್‌ಗೆ ತಿರುಗೇಟು ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನಾರಾ ಲೋಕೇಶ್ ಅವರು, ಮೊದಲು ಬೆಂಗಳೂರಿನ ರಸ್ತೆಗುಂಡಿ ಮುಚ್ಚಿ ಎಂದು ಪಾಠ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ಉಲ್ಬಣವಾಗಿದೆ.
ನಾರಾ ಲೋಕೇಶ್ ಟ್ವೀಟ್‌ನಲ್ಲಿ ಏನಿದೆ?: ನಾವು ಬೆಳೆಯಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಪ್ರತಿಯೊಂದು ಅವಕಾಶವನ್ನು ಹುಡುಕುತ್ತಿದ್ದೇವೆ. ಭಾರತದ ಅತ್ಯಂತ ಕಿರಿಯ ರಾಜ್ಯವಾಗಿ, ರಾಜ್ಯಗಳು ಹೂಡಿಕೆ ಮತ್ತು ಉದ್ಯೋಗಗಳಿಗಾಗಿ ಸ್ಪರ್ಧಿಸಿದಾಗ ಭಾರತವು ಅಭಿವೃದ್ಧಿ ಹೊಂದುತ್ತದೆ.
ಅಲ್ಲದೇ ರಸ್ತೆಗಳಲ್ಲಿನ ರಸ್ತೆ ಗುಂಡಿಗಳನ್ನು ಮೊದಲು ಮುಂದುವರಿದು ‘ನನ್ನ ವಿನಮ್ರ ಸಲಹೆ ರಸ್ತೆಗಳಲ್ಲಿನ ಗುಂಡಿಗಳನ್ನು ಮೊದಲು ಸರಿಪಡಿಸಿ, ಇಲ್ಲದಿದ್ದರೆ ವ್ಯವಸ್ಥೆ ಮುಗ್ಗರಿಸಲಿದೆ ಎಂದಿದ್ದಾರೆ.
ಈ ಟ್ವೀಟ್‌ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅತ್ಯಂತ ಕಿರಿಯ ರಾಜ್ಯವಾಗಿ ದಯವಿಟ್ಟು ತತ್ವಗಳ ಬಗ್ಗೆ ಚಿಂತಿಸಿ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಸತ್ಯತೆ ಮತ್ತು ಸಂಪೂರ್ಣ ಪ್ರತಿಭೆಯ ಆಧಾರದ ಮೇಲೆ ಬೆಳೆಯಿರಿ. ಬೇಟೆಯಾಡುವ ತಜ್ಞರಾಗಲು ಪ್ರಯತ್ನಿಸಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.
pfh6ee