ಮಾಗಡಿ ಕೋಟೆ ಸಂರಕ್ಷಣೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

0
19

ಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿಯ ನಾಡಪ್ರಭು ಕೆಂಪೇಗೌಡರ ಇತಿಹಾಸ ಪ್ರಸಿದ್ಧ ಕೋಟೆ ಸಂರಕ್ಷಣೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿದೆ.

ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಎಚ್.ಎಂ. ಕೃಷ್ಣಮೂರ್ತಿ ಅವರು ಕೋಟೆ ರಕ್ಷಣೆಗೆ ಅರ್ಜಿ ಸಲ್ಲಿಸಿದ್ದರು. ಕೋಟೆಯ ಭಾಗಶಃ ಗೋಡೆಗಳು ನಾಶವಾಗಿದ್ದು, ಕಂದಕಗಳು ಮುಚ್ಚಲ್ಪಟ್ಟಿವೆ ಹಾಗೂ ವ್ಯಾಪಾರಿಗಳು ಅಕ್ರಮವಾಗಿ ಸ್ಥಳ ಬಳಸುತ್ತಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ನಾಡಪ್ರಭು ಕೆಂಪೇಗೌಡರ ಕೋಟೆ, ಕೋಟೆಯ ಕಂದಕ ಮತ್ತು ಅವರಿಂದ ಸ್ಥಾಪಿತವಾದ ದೇವಾಲಯಗಳ ಅಭಿವೃದ್ಧಿ, ಸ್ಮಾರಕ, ಶಿಲ್ಪಗಳು, ಒತ್ತುವರಿಯಾಗಿರುವ ಕೋಟೆಯನ್ನು ಸಂರಕ್ಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ಪೀಠ ಈ ಕುರಿತು ಮುಂದಿನ ವಿಚಾರಣೆಯನ್ನು ಮುಂದೂಡಿದೆ.

Previous articleಕಾಂಗ್ರೆಸ್‌ ಶಾಸಕ ಪಪ್ಪಿ ಲಾಕರಲ್ಲಿ ಮತ್ತೆ 40 ಕೇಜಿ ಚಿನ್ನ ಜಪ್ತಿ
Next articleಭತ್ತದ ಬೆಳೆಯಲ್ಲಿ ದುಂಡಾಣು ಮಚ್ಚೆ ರೋಗ, ನಿರ್ವಹಣೆ ಕ್ರಮಗಳು

LEAVE A REPLY

Please enter your comment!
Please enter your name here