ಬೆಂಗಳೂರು: ಕುಸಿದ ಪಟಾಕಿ ವ್ಯಾಪಾರ, ವ್ಯಾಪಾರಿಗಳಿಗೆ ಸಂಕಷ್ಟ

0
68

ಅಕ್ಷತಾ ಮಿರಜ್‌ಕ‌ರ

ಬೆಂಗಳೂರು ನಗರದಲ್ಲಿ ಕಳೆದ 4 ವರ್ಷಗಳಿಂದ ಪಟಾಕಿ ವ್ಯಾಪಾರ ವಿಲ್ಲದೇ ವ್ಯಾಪಾರಸ್ಥರಿಗೆ ಸಂಕಷ್ಟ ಎದುರಾಗಿದೆ. 2020ರಿಂದ 22ರವರೆಗೆ ಕಾಲಘಟ್ಟ, ಆವಾಗ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ನಂತರದ ದಿನಗಳಲ್ಲಿ ಬಹುತೇಕ ಕಡೆಗಳಲ್ಲಿ ಪಟಾಕಿ ದುರಂತ ಸಂಭವಿಸಿ ಅನಾಹುತಗಳಾದವು.

ಈ ಮಧ್ಯೆ, ಸರ್ಕಾರ ಪಟಾಕಿಗಳನ್ನು ನಿಷೇಧಿಸಿ ಕೇವಲ ಹಸಿರು ಪಟಾಕಿ ಮಾರಾಟ ಮಾಡಬೇಕು ಎಂಬ ನಿಯಮ ತಂದಿತು. ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ
ತರಿಸಿಕೊಂಡು ಗಣೇಶೋತ್ಸವ, ದೀಪಾವಳಿ ಸಂದರ್ಭದಲ್ಲಿ ಮಾರಾಟ ಮಾಡಿ ವರ್ಷದ ಅನ್ನ ಹುಡುಕಿಕೊಳ್ಳುತ್ತಿದ್ದರು. ಕಳೆದ 5 ವರ್ಷದಿಂದ ಪಟಾಕಿ ವ್ಯಾಪಾರ ಗಣನೀಯವಾಗಿ ಕುಸಿತಾ ಬಂತು.

ನಗರದಲ್ಲಿ ಸುಮಾರು 500 ರಿಂದ 600 ಕುಟುಂಬಗಳು ಪಟಾಕಿ ಮಾರಾಟ ಮಾಡುತ್ತ ಬಂದಿದ್ದರು.ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರವಿಲ್ಲದೇ ತೀರಾ ಸಂಕಷ್ಟವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕೋವಿಡ್ ನಂತರ ವ್ಯಾಪಾರ ಕುದುರಬಹುದು ತಿಳಿದಿದ್ದೆವು. ಆದರೆ ಸರ್ಕಾರ ಪಟಾಕಿ ನಿಷೇಧ ಗೊಳಿಸಿರುವುದರಿಂದ ವ್ಯಾಪಾರವೇ ಬೇಡ ಎಂದು ಅನಿಸಿದೆ ಎಂದು ಹೇಳುತ್ತಿದ್ದಾರೆ.

ನಗರದ ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದ ನಂತರ ಸರ್ಕಾರ ಮದುವೆ, ಗಣೇಶ ಉತ್ಸವ ರಾಜಕೀಯ ಕಾರ್ಯಕ್ರಮಗಳಲ್ಲಿ ಮಾತ್ರ ಪಟಾಕಿ ಸಿಡಿಸೋದಕ್ಕೆ ನಿಷೇಧ ಹೇರಿತ್ತು. ಕೇವಲ ದೀಪಾವಳಿಯಲ್ಲಿ ಹಸಿರು ಪಟಾಕಿ ಬಳಸುವುದಕ್ಕೆ ಅವಕಾಶ ನೀಡಿತ್ತು. ನಗರದ
ಬೀದಿಬದಿ ವ್ಯಾಪಾರಿಗಳು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಪರಿಸರಕ್ಕೆ ಹಾನಿಯುಂಟು ಮಾಡುವಂತಹ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ.

ಇಂಥವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಕೇವಲ ಹಸಿರು ಪಟಾಕಿ ಬಳಸುವಂತೆ ಆದೇಶ ನೀಡಿತ್ತು. ಆದರೆ ಜನರು ಜನರು ಮಾತ್ರ ಪಟಾಕಿಗಳನ್ನೇ ಬಳಸಬಾರದೆಂದು ನಿರ್ಧಾರ ಮಾಡಿದ್ದು, ಕೋವಿಡ್ ನಂತರದ ಸಮಯದಿಂದ ಪಟಾಕಿ ವ್ಯಾಪಾರದಲ್ಲಿ ಯಾವುದೇ ರೀತಿಯ ಲಾಭವಿಲ್ಲದೇ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಪಟಾಕಿ ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೋವಿಡ್ ಬಳಿಕ ವ್ಯಾಪಾರ ನಷ್ಟ: ಬೆಂಗಳೂರು ನಗರದಲ್ಲಿ ಪಟಾಕಿ ವ್ಯಾಪಾರ ಮಾಡುವವರು ಸುಮಾರು 500-600 ಕುಟುಂಬಗಳಿದ್ದು, ಕೋವಿಡ್ ನಂತರದ ಸಮಯದಿಂದ ಯಾವುದೇ ರೀತಿಯ ವ್ಯಾಪಾರ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಪಿಎಮ್‌ಎಲ್‌ಏಪ್ – ಆಲ್ ಇಂಡಿಯಾ ಫೆಡರೇಷನ್ ಸೆಲ್ಲರ್ ಅಸೋಸಿಯೇಷನ್‌ ಸದಸ್ಯರು ಹೇಳಿದ್ದಾರೆ.

Previous articleಯಾದಗಿರಿ: ಶಾಲೆ ಶೌಚಾಲಯದಲ್ಲಿ 9ನೇ ತರಗತಿ ಬಾಲಕಿಗೆ ಹೆರಿಗೆ
Next articleAnchor Anushree: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಅನುಶ್ರೀ

LEAVE A REPLY

Please enter your comment!
Please enter your name here