ಜಿಬಿಎ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ

0
67

ಜಿಬಿಎ. ಹೊಸದಾಗಿ ರಚಿತವಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರಪಾಲಿಕೆಗಳ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಸಿದ್ಧತೆ ನಡೆಸಿದ್ದು. ಪೂರ್ವತಯಾರಿ ಸಮಿತಿಯನ್ನು ರಚಿಸಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯೂ ಬಹುವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಬೆನ್ನಲ್ಲೇ 5 ನಗರ ಪಾಲಿಕೆಗಳ ಚುನಾವಣೆಯ ಸಾಧ್ಯತೆಗಳು ತೆರೆದುಕೊಂಡಿವೆ. ಪಾಲಿಕೆ ಚುನಾವಣೆಗಳನ್ನು ನಡೆಸಲು ಉತ್ಸುಕವಾಗಿರುವ ಕಾಂಗ್ರೆಸ್ ಪಕ್ಷ ಇತ್ತೀಚೆಗಷ್ಟೆ ಪ್ರತಿ ಪಾಲಿಕೆಯ ಚುನಾವಣೆಯ ಮೇಲುಸ್ತುವಾರಿಗೆ ಸಚಿವರ ತಂಡವನ್ನು ರಚಿಸಿತ್ತು.

ಇದೀಗ ಬೆಂಗಳೂರು 5 ನಗರ ಪಾಲಿಕೆಗಳ ಚುನಾವಣಾ ಪೂರ್ವತಯಾರಿ ಸಮಿತಿಯನ್ನು ರಚಿಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರನ್ನು ಸಮಿತಿಯ ಸಂಚಾಲಕರಾಗಿ ನೇಮಿಸಿದೆ. ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್ ಶಾಸಕರು. 20240 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಬೆಂಗಳೂರು ನಗರದ ಎಲ್ಲಾ 5 ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು. 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು, ಬೆಂಗಳೂರು ನಗರದ ವಿಧಾನಪರಿಷತ್‌ ಸದಸ್ಯರು, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳು, ಬೆಂಗಳೂರು ನಗರವಾಸಿ ಕಾರ್ಯದರ್ಶಿಗಳು, ಮುಂಚೂಣಿ ಘಟಕದ ರಾಜ್ಯಾಧ್ಯಕ್ಷರು, ಎಐಸಿಸಿ ಸದಸ್ಯ ಸುನಿಲ್ ಕನಗೋಳ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಇದೇ ವೇಳೆ ಅಖಿಲ ಭಾರತ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರನ್ನು ಸಮಿತಿಯ ಸಹ ಸಂಚಾಲಕರನ್ನಾಗಿ ನಿಯೋಜಿಸಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳು, ಮಾಜಿ ಮೇಯರ್‌ಗಳು, ಬಿಬಿಎಂಪಿಯ ಮಾಜಿ ಸದಸ್ಯರು. ಬಿಸಿಸಿ ಅಧ್ಯಕ್ಷರು ಹಾಗೂ ಇನ್ನಿತರ ಸ್ಥಳೀಯ ಮುಖಂಡರೊಂದಿಗೆ ಸಭೆಗಳನ್ನು ನಡೆಸಲು ಸಮಿತಿಗೆ ಸೂಚಿಸಲಾಗಿದೆ.

ಈ ಎಲ್ಲಾ ಮುಖಂಡರ ಜತೆ ಚರ್ಚಿಸಿ ಅವರು ನೀಡುವ ಮನವಿ ಹಾಗೂ ಸಲಹೆಗಳನ್ನು ಕ್ರೋಡೀಕರಿಸಿ ಅವುಗಳನ್ನು ಅನುಷ್ಠಾನಗೊಳೀಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಮಿತಿಗೆ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ.

ಮೇಲ್ಮನೆ ಸದಸ್ಯರಿಗೆ ಉಸ್ತುವಾರಿ: ಇದೇ ವೇಳೆ ಬೆಂಗಳೂರಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಸಚಿವರೊಂದಿಗೆ ಸಹಕರಿಸಲು ವಿಧಾನಪರಿಷತ್ತಿನ ಕಾಂಗ್ರೆಸ್ ಹಾಲಿ ಮತ್ತು ಮಾಜಿ ಸದಸ್ಯರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಡಿ.ಟಿ. ಶ್ರೀನಿವಾಸ್‌, ಬೊಮ್ಮನಹಳ್ಳಿ ಕ್ಷೇತ್ರಕ್ಕೆ ರಾಮೋಜಿಗೌಡ, ದಾಸರಹಳ್ಳಿಗೆ ಗೋವಿಂದರಾಜ್, ಚಿಕ್ಕಪೇಟೆಗೆ ನಜೀರ್ ಅಹ್ಮದ್, ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಎಂ.ಆರ್.ಸೀತಾರಾಂ, ಸಿ.ವಿ.ರಾಮನ್ ನಗರಕ್ಕೆ ಸುಧಾಂದಾಸ್‌, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ರಮೇಶ್‌ ಬಾಬು, ಬಸವನಗುಡಿ ಕ್ಷೇತ್ರಕ್ಕೆ ಯು.ಬಿ.ವೆಂಕಟೇಶ್, ಮಹಾಲಕ್ಷ್ಮಿಲೇಔಟ್‌ಗೆ ಸಲೀಂ ಅಹ್ಮದ್‌, ಮಹದೇವಪುರ ಕ್ಷೇತ್ರಕ್ಕೆ ನಾಗರಾಜ್‌ ಯಾದವ್, ಪದ್ಮನಾಭನಗರಕ್ಕೆ ಎಲ್‌. ಶ್ರೀನಿವಾಸ್‌ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಎಐಸಿಸಿ ಸದಸ್ಯ ಸುನಿಲ್ ಕನಗೋಳು ಅವರನ್ನು ನಗರಪಾಲಿಕೆ ಉಸ್ತುವಾರಿ ಸಚಿವರುಗಳ ಸಂಯೋಜಕರನ್ನಾಗಿಯೂ ನಿಯೋಜಿಸಲಾಗಿದೆ.

ಇದೇ ವೇಳೆ ಬೆಂಗಳೂರಿನ II ವಿಧಾನಸಭಾ ಕ್ಷೇತ್ರಗಳಲ್ಲಿ ಸಚಿವರೊಂದಿಗೆ ಸಹಕರಿಸಲು ವಿಧಾನಪರಿಷತ್ತಿನ ಕಾಂಗ್ರೆಸ್ ಹಾಲಿ ಮತ್ತು ಮಾಜಿ ಸದಸ್ಯರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಡಿ.ಟಿ. ಶ್ರೀನಿವಾಸ್‌, ಬೊಮ್ಮನಹಳ್ಳಿ ಕ್ಷೇತ್ರಕ್ಕೆ ರಾಮೋಜಿಗೌಡ, ದಾಸರಹಳ್ಳಿಗೆ ಗೋವಿಂದರಾಜ್, ಚಿಕ್ಕಪೇಟೆಗೆ ನಜೀರ್ ಅಹ್ಮದ್, ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಎಂ.ಆರ್.ಸೀತಾರಾಂ ನೇಮಿಸಲಾಗಿದೆ.

ಸಿ.ವಿ.ರಾಮನ್ ನಗರಕ್ಕೆ ಸುಧಾಂದಾಸ್‌, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ರಮೇಶ್‌ ಬಾಬು, ಬಸವನಗುಡಿ ಕ್ಷೇತ್ರಕ್ಕೆ ಯು.ಬಿ.ವೆಂಕಟೇಶ್, ಮಹಾಲಕ್ಷ್ಮಿಲೇಔಟ್‌ಗೆ ಸಲೀಂ ಅಹ್ಮದ್‌, ಮಹದೇವಪುರ ಕ್ಷೇತ್ರಕ್ಕೆ ನಾಗರಾಜ್‌ ಯಾದವ್, ಪದ್ಮನಾಭನಗರಕ್ಕೆ ಎಲ್‌. ಶ್ರೀನಿವಾಸ್‌ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

Previous article‘ಬುದ್ಧಿವಂತ’ ನಟ, ನಿರ್ದೇಶಕ ಉಪೇಂದ್ರ ಫೋನ್ ಹ್ಯಾಕ್!
Next articleರಾಮನಗರ: ಬಿಡದಿ ಟೌನ್‍ಶಿಪ್​ ಯೋಜನೆಗೆ ಅಪಸ್ವರ

LEAVE A REPLY

Please enter your comment!
Please enter your name here