ಸಿಎಂ 15 ವರ್ಷ ಬೇಕಾದ್ರೂ ಇರ್ತಾರೆ: ಡಿಸಿಎಂ ಡಿಕೆಶಿ

0
28

ನವದೆಹಲಿ: ರಾಜ್ಯದಲ್ಲಿ ಯಾವುದೇ ನವೆಂಬರ್ಕ್ರಾಂತಿ ಆಗಲ್ಲ. ಬದಲಾಗಿ 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿ ಆಗಲಿದೆ . ಸಿಎಂ 5 ವರ್ಷ, 10 ವರ್ಷ, 15 ವರ್ಷ ಇರಬೇಕೆಂದರೆ ಇರುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಥವಾ ನಾವು ಹೇಳಿದ್ದೀವಾ ಎಂದೂ ಪ್ರಶ್ನಿಸಿದ್ದಾರೆ. ಮೊನ್ನೆಯಷ್ಟೆ ಸೋದರ ಡಿ.ಕೆ.ಸುರೇಶ್, ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿಲ್ಲ. ಇದ್ದಷ್ಟು ದಿನವೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಮುಂದೆಯೂ ಅವರೇ ಇರಬಹುದು ಎಂದಿದ್ದರು.

ಇದೀಗ ಡಿಕೆಶಿ ಕೂಡ ಅದೇ ಧಾಟಿಯಲ್ಲಿ ಹೇಳಿರುವುದು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ಚೌಕಟ್ಟು ಮೀರಲ್ಲ: ಹೈಕಮಾಂಡ್ ಹೇಗೆ ಹೇಳುತ್ತೆ ಹಾಗೆ ನಾವು ನಡೆದುಕೊಳ್ಳುತ್ತೇವೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಚೌಕಟ್ಟು ಬಿಟ್ಟು ನಾನು ಎಂದೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಡಿಸಿಎಂ, ಯಾವುದೇ ವರಿಷ್ಠರನ್ನು ಭೇಟಿಯಾಗಿಲ್ಲ. ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದಿದ್ದಾರೆ.

ಪಥಸಂಚಲನ ಕುರಿತು, ಆರ್‌ಎಸ್‌ಎಸ್ ಆಗಲಿ ಅಥವಾ ಯಾರೇ ಆಗಲಿ ಅನುಮತಿ ತೆಗದುಕೊಂಡು ಕಾರ್ಯಕ್ರಮ ಮಾಡಲಿ ಎಂದಿದ್ದೆವು. ಜಗದೀಶ್ ಶೆಟ್ಟರ್ ಮಾಡಿದ ಆದೇಶಕ್ಕೆ ಬದ್ಧ ಎಂದು ಹೇಳಿದ್ದೆವು. ಹೈಕೋರ್ಟ್‌ನಲ್ಲಿ ಏನಾಗಿದೆ ಎಂಬುದನ್ನು ಕಾನೂನು ತಂಡ ನೋಡಿಕೊಳ್ಳಲಿದೆ. ಮೇಕೆದಾಟು ವಿಚಾರದಲ್ಲಿ ಸುಪ್ರೀಂ ಕೋರ್ಟ್ ಪ್ರತ್ಯೇಕ ಪೀಠ ರಚನೆ ಮಾಡುವುದಾಗಿ ಹೇಳಿದೆ ಎಂದರು. ನಿರ್ಲಕ್ಷಿಸಿದ್ರೆ ಗೇಟ್‌ ಪಾಸ್: ವೋಟ್ ಚೋರಿ ವಿಚಾರಕ್ಕೆ

ಸಂಬಂಧಿಸಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ವರದಿ ನೀಡಲು ಸೂಚಿಸಿದ್ದೆ. ಸಹಿ ಅಭಿಯಾನದ ಬಗ್ಗೆ ವರದಿ ನೀಡಲು ಕೇಳಿದ್ದೆ. ನ.9ರೊಳಗೆ ವರದಿ ನೀಡಬೇಕು. ಅಭಿನಾಯದಲ್ಲಿ ಸಕ್ರಿಯರಾಗದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಶಾಸಕರ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ಕ್ರಮ ತೆಗೆದುಕೊಳ್ತಾರೆ. ಯಾವುದೇ ಮುಲಾಜಿಲ್ಲದೇ ನಾನು ಹೈಕಮಾಂಡ್‌ಗೆ ವರದಿ ನೀಡುತ್ತೇನೆ ಎಂದು ಡಿಸಿಎಂ ಎಚ್ಚರಿಸಿದರು.

ಇಂದು ರಾಜಣ್ಣ ಭೋಜನ ಕೂಟ: ಮಾಜಿ ಸಚಿವ ರಾಜಣ್ಣ ತಮ್ಮ ಕ್ಯಾತ್ಸಂದ್ರದ ನಿವಾಸದಲ್ಲಿ ಇಂದು ಮಧ್ಯಾಹ್ನ ಅಹಿಂದ ನಾಯಕರ ಸಭೆ ಮತ್ತು ಭೋಜನಕೂಟ ಆಯೋಜಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಚಿವರಾದ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಜಮೀರ್ ಅಹಮದ್ ಖಾನ್, ಶಾಸಕರು ಸಹಿತ 70 ಮಂದಿ ಅಹಿಂದ ಮುಖಂಡರಿಗೆ ಭೋಜನಕೂಟಕ್ಕೆ ಆಹ್ವಾನಿಸಿದ್ದಾರೆ.

ಅಹಿಂದ ರಾಲಿಗೆ ರಹಸ್ಯ ತಯಾರಿ: ನಾಯಕತ್ವ ಬದಲಾವಣೆ ವಿಚಾರ ಸದ್ದು ಮಾಡುತ್ತಿರುವಂತೆಯೇ ಅಹಿಂದ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತಿದೆ. ಇದೇ ತಿಂಗಳಲ್ಲಿ ಅಹಿಂದ ಸಚಿವರು, ಶಾಸಕರು, ಮುಖಂಡರನ್ನು ಒಳಗೊಂಡು ದೊಡ್ಡಮಟ್ಟದಲ್ಲಿಯೇ ಸಮಾವೇಶ ನಡೆಸಿ ಸಿಎಂ ಸಿದ್ದು ಪರ ಅಹಿಂದ ಬಲಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಸಮಾವೇಶ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ಇತ್ತೀಚೆಗಷ್ಟೆ ಸಚಿವ ಪರಂ ಹೇಳಿದ್ದರು.

ಬೆಂಗೂರಿಗೆ ಚಿದಂಬರಂ: ಕುತೂಹಲ ನವೆಂಬ‌ರ್ ಕ್ರಾಂತಿಯ ಕುರಿತು ಹಲವು ಆಯಾಮಗಳಲ್ಲಿ ವಿಶ್ಲೇಷಣೆ ನಡೆದಿರುವ ಬೆನ್ನಲ್ಲೇ ಕಾಂಗ್ರೆಸ್ ವರಿಷ್ಠ ಪಿ.ಚಿದಂಬರಂ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ ಹೈಕಮಾಂಡ್ ನಿರ್ದೇಶನದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿವಿಧ ವಿದ್ಯಮಾನಗಳ ಕುರಿತು ಪ್ರಮುಖ ನಾಯಕರಿಂದ ಅಭಿಪ್ರಾಯ ಸಂಗ್ರಹ ಮಾಡಿರುವುದಾಗಿ ಹೇಳಲಾಗಿದೆ.

Previous articleತಾರಾತಿಗಡಿ: ಊಟ ಊಟ ಭರ್ಜರಿ ಊಟ ಆಮೇಲಿಂದ ಮಿಂಚಿನ ಓಟ
Next articleಕುಕ್ಕೆ ಶ್ರೀಕ್ಷೇತ್ರದ ಹರಕೆ ಫಲಿಸಿತೇ? ಕತ್ರಿನಾ ಕೈಫ್ ಬಾಳಲ್ಲಿ ಪುತ್ರೋತ್ಸವ!

LEAVE A REPLY

Please enter your comment!
Please enter your name here