ಬೆಂಗಳೂರ: ಹಾಡಹಗಲೇ ATM ವಾಹನ ಹೈಜಾಕ್ – 7 ಕೋಟಿ ದರೋಡೆ

0
51

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ನ.19) ಮಧ್ಯಾಹ್ನ ನಡೆದ ದರೋಡೆ ಘಟನೆಯೊಂದು ನಗರವನ್ನು ಬೆಚ್ಚಿಬೀಳಿಸಿದೆ. ಹಾಡಹಗಲೇ ಮುಖ್ಯರಸ್ತೆಯಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನದಿಂದ 7.11 ಕೋಟಿ ರೂ. ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದೆ.

ಆರ್‌ಬಿಐ ಅಧಿಕಾರಿಗಳು ಎಂದು ಸುಳ್ಳು ಹೇಳಿ ದರೋಡೆ: ಸೌತ್ ಎಂಡ್ ಸರ್ಕಲ್ ದಿಕ್ಕಿನತ್ತ ಪ್ರಯಾಣಿಸುತ್ತಿದ್ದ CMS ಕಂಪನಿಯ ಹಣ ಸಾಗಿಸುವ GJ 01 HT 9173 ನಂಬರಿನ ವ್ಯಾನ್ ಅನ್ನು, ಡೇರಿ ಸರ್ಕಲ್ ಬಳಿಯಲ್ಲಿ ಇನ್ನೋವಾ ಕಾರಿನಲ್ಲಿ ಬಂದ 7–8 ಮಂದಿ ದರೋಡೆಕೋರರು ಅಡ್ಡಗಟ್ಟಿ ನಿಲ್ಲಿಸಿದರು. ಅವರೆಲ್ಲರೂ “ನಾವು RBI ಅಧಿಕಾರಿಗಳು, ಎಂದು ಹೇಳಿಕೊಂಡು ತಪಾಸಣೆ ಮಾಡುವುದಾಗಿ ಹೇಳಿ ವ್ಯಾನ್‌ನಲ್ಲಿದ್ದ ಸಿಬ್ಬಂದಿಯನ್ನು ಗಾಬರಿಗೊಳಿಸಿ. ಬಳಿಕ ಗನ್ ಮ್ಯಾನ್ ಮತ್ತು ಸಿಬ್ಬಂದಿ ನಾಲ್ವರನ್ನು ವಾಹನದಿಂದ ಇಳಿಸಿ ಒಂದೇ ಕಡೆ ನಿಲ್ಲಿಸಿದ್ದಾರೆ.

ವಾಹನ ಸಮೇತ ಚಾಲಕನನ್ನು ಕರೆದೊಯ್ದ ಗ್ಯಾಂಗ್: ಅಪರಾಧಿಗಳು ನಂತರ ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್ ಫ್ಲೈಓವರ್‌ವರೆಗೆ ಕರೆದೊಯ್ದು, ಅಲ್ಲಿ ವ್ಯಾಂನಲ್ಲಿದ್ದ 7.11 ಕೋಟಿ ರೂ. ನಗದು ಹಣವನ್ನು ಇನ್ನೋವಾ ಕಾರಿಗೆ ಸ್ಥಳಾಂತರಿಸಿ ಸ್ಥಳದಿಂದ ಪರಾರಿಯಾದರು. ಸಂಪೂರ್ಣ ಕಾರ್ಯಾಚರಣೆ ಕೆಲವೇ ನಿಮಿಷಗಳಲ್ಲಿ ನಡೆದಿದೆ.

ಘಟನೆ ನಂತರ ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡ್ರೈವರ್, ಇಬ್ಬರು ಗನ್ ಮ್ಯಾನ್ ಹಾಗೂ ಇನ್ನೊಬ್ಬ CMS ಸಿಬ್ಬಂದಿ ಸೇರಿ ನಾಲ್ವರನ್ನು ಪೊಲೀಸರು ಈಗಾಗಲೇ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ದರೋಡೆಗಾರರು ಹಲವು ದಿನಗಳಿಂದಲೇ CMS ವಾಹನಗಳ ಚಲನವಲನ, ರೂಟ್, ಸಮಯಗಳನ್ನು ನಿಗದಿತವಾಗಿ ಹಿಂಬಾಲಿಸುತ್ತಿದ್ದರು. ನಂತರ ಇಂದು ಸೂಕ್ತಾವಕಾಶ ಸಿಗುತ್ತಿದ್ದಂತೆ ಸುಳ್ಳು ಗುರುತನ್ನು ತೋರಿಸಿ ದರೋಡೆ ಮಾಡಿದ್ದಾರೆ.

Previous articleಜಿಯೋ ಬಳಕೆದಾರರಿಗೆ ಉಚಿತ ಜೆಮಿನಿ ಪ್ರೊ
Next articleMoose Wala, ಬಾಬಾ ಸಿದ್ದಿಕಿ ಹತ್ಯೆಯ ಮಾಸ್ಟರ್‌ಮೈಂಡ್: ದೆಹಲಿಯಲ್ಲಿ NIA ಬಲೆಗೆ ಬಿಷ್ಣೋಯ್!

LEAVE A REPLY

Please enter your comment!
Please enter your name here