ಹೊಸದುರ್ಗ ಪಟ್ಟಣಕ್ಕೆ ನುಗ್ಗಿದ ಕರಡಿಗಳು

0
12

ಹೊಸದುರ್ಗ: ಪಟ್ಟಣದ ಗೌಸಿಯ ನಗರ ಬಡಾವಣೆಗೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ 3 ಕರಡಿಗಳು ಮನೆಗಳ ಸಮೀಪ ಬಂದಿದ್ದು, ಕರಡಿಗಳನ್ನು ಪ್ರತ್ಯಕ್ಷವಾಗಿ ಕಂಡ ಸ್ಥಳೀಯರು ಜೋರಾಗಿ ಕೇಕೆ ಹಾಕಿದ್ದಾರೆ. ತಕ್ಷಣವೇ ಕರಡಿಗಳು ಭೈರಪ್ಪನ ಬೆಟ್ಟ ಹತ್ತಿವೆ. ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಟ್ಟಣದಲ್ಲಿ ಕಳೆದ 6 ತಿಂಗಳಿನಿಂದಲೂ ಜಂಗಮ ನಗರ, ಮಾರುತಿ ನಗರ, ಸಿದ್ದರಾಮ ನಗರ, ಚನ್ನಸಮುದ್ರ ರಸ್ತೆ, ಕುಂಚಿಟಿಗ ಮಠದ ಸಮೀಪ ಹಾಗೂ ಹಲವೆಡೆ ಆಗ್ಗಾಗ್ಗೆ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು, ಜನರು ನಿತ್ಯವೂ ಆತಂಕದಲ್ಲಿಯೇ ಜೀವನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶನಿವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ 3 ಕರಡಿಗಳು ಕಾಣಿಸಿಕೊಂಡವು. ತಕ್ಷಣವೇ ಕರಡಿಗಳನ್ನು ಕಂಡ ಜನರು ಜೋರಾಗಿ ಕೇಕೆ ಹಾಕಿದಾಗ ಕರಡಿಗಳು ಭೈರಪ್ಪನ ಬೆಟ್ಟ ಹತ್ತಿದವು. ಹೀಗೆಯೇ ಹಾಡ ಹಗಲೇ ಕರಡಿಗಳು ಮನೆ ಹತ್ತಿರ ಬಂದರೆ ಹೇಗೆ? ಸಣ್ಣ ಮಕ್ಕಳು, ವೃದ್ಧರು, ಮಹಿಳೆಯರು, ಅಂಗವಿಕಲರು ಮನೆಯ ಮುಂಭಾಗ ಕುಳಿತುಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರಡಿಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಬೋನಳವಡಿಸಿ ಕರಡಿಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಬೇಕು. ಕರಡಿಗಳ ಹಾವಳಿಗೆ ನಿತ್ಯವೂ ಆತಂಕದಲ್ಲಿ ಜೀವನದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ಇಮ್ರಾನ್ ಹೇಳಿದರು.

Previous articleಸರಕಾರದ ಖಜಾನೆ ಲಾಕ್ ಆಗಿದೆ
Next articleತೆಲಂಗಾಣ ಶಾಸಕರಿದ್ದ ಜೀಪು ಅಪಘಾತ: ಶಾಸಕರು ಪಾರು