ಸಿಇಐಆರ್ ವೆಬ್ ಪೋರ್ಟಲ್ ಮೂಲಕ ಕಳೆದುಹೋದ ಮೊಬೈಲ್ ಮರಳಿ ಮಾಲೀಕನ ಕೈಗೆ

0
15

ದಾವಣಗೆರೆ: ನೂತನ ಸಿಇಐಆರ್ ವೆಬ್ ಪೋರ್ಟಲ್ ಮೂಲಕ ಕಳೆದುಹೋದ ಮೊಬೈಲ್ ಮರಳಿ ತನ್ನ ಮಾಲೀಕನ ಕೈ ಸೇರಿದೆ. ನೂತನ ಸಿಇಐಆರ್ ವೆಬ್ ಪೋರ್ಟಲ್ ಮೂಲಕ ಪತ್ತೆಯಾದ ಜಿಲ್ಲೆಯ ಮೊದಲ ಪ್ರಕರಣ ಇದಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಅವರು ಮೊಬೈಲ್​ನ್ನು ವಾರಸುದಾರರಿಗೆ ಮರಳಿ ನೀಡಿದ್ದಾರೆ. ಕೇಂದ್ರ ದೂರಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸಿಇಐಆರ್ ​(CEIR) ಪೋರ್ಟಲ್ ಬಳಸಿಕೊಂಡು ಕಳುವಾದ ಮೊಬೈಲ್ ಬ್ಲಾಕ್ ಮಾಡಬಹುದಾಗಿದೆ. ಈ ಪೋರ್ಟಲ್ ಮೂಲಕವೇ ದಾವಣಗೆರೆ ಜಿಲ್ಲಾ ಪೊಲೀಸರು ಮೊಬೈಲ್ ಪತ್ತೆ ಹಚ್ಚಿ ಸಂಬಂಧಪಟ್ಟ ವ್ಯಕ್ತಿಗೆ ಒಪ್ಪಿಸಿದ್ದಾರೆ.

Previous articleಪತ್ನಿ ಕೊಂದು ಕಾಡಿಗೆ ಎಸೆದ ಪತಿ
Next articleಔರಂಗಾಬಾದ್ ಮತ್ತು ಒಸ್ಮಾನಾಬಾದ್‌ ನಗರಗಳ ಮರುನಾಮಕರಣ