ಬೆಂಗಳೂರು: ವಿಜಯಪುರ ಬಸ್ ನಿಲ್ದಾಣ ಇನ್ನು ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣವಾಗಲಿ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ, ಈ ಕುರಿತು ಮುಖ್ಯಮಂತ್ರಿಗಳಿಗೆ ಶಕ್ತಿ ಯೋಜನೆಯ ಉದ್ಫಾಟನೆ ಸಂದರ್ಭದಲ್ಲಿ ಪತ್ರ ಬರೆದಿರುವ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಆ ಪತ್ರವನ್ನು ಹಂಚಿಕೊಂಡಿದ್ದು, ಅದರೊಂದಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ ಅವರ ಟ್ವೀಟ್‌ನಲ್ಲಿ ‘ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣವಾಗಲಿ’ ವಿಜಯಪುರ ಬಸ್ ನಿಲ್ದಾಣ!
ನಮ್ಮ ನಾಡಿನ ಹೆಮ್ಮೆ ಕಿತ್ತೂರಿನ ರಾಣಿ ಚೆನ್ನಮ್ಮ ಅವರ ಹೆಸರು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ. ರಾಣಿ ಚೆನ್ನಮ್ಮ ಅವರ ಸಾಹಸಗಾಥೆಗಳು ಮುಂದಿನ ತಲೆಮಾರುಗಳಿಗೂ ಉಳಿಯಬೇಕೆಂಬ ಉದ್ದೇಶದಿಂದ 2013-18ರ ಅವಧಿಯಲ್ಲಿ ನಮ್ಮ ಸರಕಾರವಿದ್ದಾಗ ನಗರದ ಕೇಂದ್ರ ಬಸ್ ನಿಲ್ದಾಣದ ವೃತ್ತಕ್ಕೆ ‘ಕಿತ್ತೂರು ರಾಣಿ ಚೆನ್ನಮ್ಮ ವೃತ್ತ’ ಎಂದು ನಾಮಕರಣ ಮಾಡಿದ್ದೆವು. ಇದೇ ವೃತ್ತದಲ್ಲಿ ಅವರ ಬೃಹತ್ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ.
ವಿಜಯಪುರ ಬಸ್ ನಿಲ್ದಾಣಕ್ಕೆ ಚೆನ್ನಮ್ಮನವರ ಹೆಸರನ್ನು ಇರಿಸಬೇಕೆಂದು ಕೋರಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಲಗತ್ತಿಸಿದ್ದಾರೆ.

