ರಾಹುಲ್ ಗಾಂಧಿ ರೋಡ್ ಶೋ

0
21

ಕುಷ್ಟಗಿ: ಚುನಾವಣಾ ನಿಮಿತ್ತವಾಗಿ ಅಬ್ಬರದ ಪ್ರಚಾರದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ ಪರವಾಗಿ ಮತಯಾಚನೆ ಮಾಡಲು ಎಐಸಿಸಿ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಕುಷ್ಟಗಿ ಗೆ ಏ.28 ರಂದು ಭೇಟಿ ನೀಡಲಿದ್ದು ಪಟ್ಟಣದ ಎಂಐ ಎದುರುಗಡೆ ಇರುವ ಜಾಗೆಯಲ್ಲಿ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮರಿಯಪ್ಪ ಮಾದರ ಹೇಳಿದರು. 
ಪಟ್ಟಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ,ಏ.28 ರಂದು ರಾಹುಲ್ ಗಾಂಧಿ ಹೆಲಿಪ್ಯಾಡ್ ಮೂಲಕ ಬೀದರಿನ ವಿದ್ಯಾನಗರದಿಂದ ಕುಷ್ಟಗಿಗೆ ಮದ್ಯಾನ್ಹ 3:35ಕ್ಕೆ ಆಗಮಿಸಲಿದ್ದಾರೆ.  ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಐಡಿಎಫ್ಸಿ ಬ್ಯಾಂಕ ನಿಂದ ಎಂಐ ಎದುರಿಗಡೆ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮಕ್ಕೆ ತೆರೆದ ವಾಹನದಲ್ಲಿ ರ್ಯಾಲಿ ಮುಖಾಂತರ ಸಾಗಿ ತಲುಪಿ ನಂತರ ಮಹಿಳೆಯರ ಜೊತೆ ಒಂದು ಗಂಟೆ ಕಾಲ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.

Previous articleಪಾಟೀಲ್ ಗೆಲ್ಲಿಸಿ,ಅಭಿವೃದ್ಧಿಗೆ ಜೈಕಾರ ಹಾಕಿ : ಸುದೀಪ್ ಕರೆ
Next articleಮೀನುಗಾರರ ಹಿತ ಕಾಯಲು ಬದ್ಧ