ರಾಹುಲ್ ಗಾಂಧಿ ಚುನಾವಣೆ ಏಜೆಂಟ್ ರಾ?
ಮುಖ್ಯಮಂತ್ರಿ ಬೊಮ್ಮಾಯಿ ಪ್ರಶ್ನೆ

0
12
CM

ಹುಬ್ಬಳ್ಳಿ : ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಚುನಾವಣೆ ಏಜೆಂಟ್ ರಾಗಿ ಕೆಲಸ ಮಾಡುತ್ತಿದ್ದಾರಾ? ಎಂದು
ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಆದರ್ಶನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರನ್ನು ಚುನಾವಣೆ ಏಜೆಂಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಒಬ್ಬ ಮಾಜಿ ಸಿಎಂ, ಅನುಭವಿ ರಾಜಕಾರಣಿ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರೆ ಏನರ್ಥ? ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಿಂದ ಹಾಗೂ ಅವರಿಗೆ ಸಿಗುತ್ತಿರುವ ಬೆಂಬಲದಿಂದ ಸಿದ್ದರಾಮಯ್ಯ ಅವರು ಎಷ್ಟು ಹತಾಶರಾಗಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ ಶಾ ಮತ್ತೆ ರಾಜ್ಯಕ್ಕೆ ಬರುತ್ತಾರೆ. ಮಾರ್ಚ್ ೧ರಿಂದ ನಾಲ್ಕು ಕಡೆಗಳಿಂದ ರಥ ಯಾತ್ರೆ ಆಯೋಜಿಸಲಾಗಿದೆ. ಇದು ಎಲ್ಲ ಕ್ಷೇತ್ರಗಳಲ್ಲಿ ಸಂಚರಿಸಿ ದಾವಣಗೆರೆ ಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಇಂಥ ಗೋ ಬ್ಯಾಕ್ ಬಹಳ ನೋಡಿದ್ದೇವೆ:
ಬನವಾಸಿ ಕದಂಬೋತ್ಸವ ನಡೆಯುವ ಸ್ಥಳದಲ್ಲಿ ಗೋ ಬ್ಯಾಕ್ ಪೋಸ್ಟರ್ ಅಂಟಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಇಂಥ ಗೋ ಬ್ಯಾಕ್ ಬಹಳ ನೋಡಿದ್ದೇವೆ ಎಂದರು

Previous articleಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ
Next articleಏಳನೇ ವೇತನ ಆಯೋಗ ಮಧ್ಯಂತರ ವರದಿ ಜಾರಿಗೆ ಸರ್ಕಾರ ಸಿದ್ಧ: ಮುಖ್ಯಮಂತ್ರಿ