ಭೋಜೇಗೌಡರು‌ ಬಹಿರಂಗ ಕ್ಷಮೆ ಕೇಳಲಿ

0
15
ಜೋಶಿ

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರಿಗೆ ಸಚಿವ ಜೋಶಿ ಪರ ವಕೀಲರು ಬುಧವಾರ ನೋಟಿಸ್ ಜಾರಿ ಮಾಡಿದ್ದಾರೆ.
ಭಾರತೀಯ ವೈದ್ಯಕೀಯ ಮಂಡಳಿಗೆ ನೇಮಕಾತಿ ವಿಚಾರದಲ್ಲಿ ೨ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಭೋಜೇಗೌಡ ಅವರು ಆರೋಪ ಮಾಡಿದ್ದರು.
ಇವರು ಆರೋಪ ಮಾಡಿದ ಮೇಲೆ ಇದಕ್ಕೆ ಸಂಬಂಧಿಸಿದಂತೆ ಜೋಶಿ ಅವರು ಪ್ರತಿಕ್ರಿಯೆ ನೀಡಿ ಇದು ಆಧಾರ ರಹಿತ ಆರೋಪ ಎಂದು ತಿಳಿಸಿದ್ದರು. ಅಲ್ಲದೇ ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದರು. ಅದರ ಪ್ರಕಾರ ಸಚಿವ ಜೋಶಿ ಅವರ ಕೋರಿಕೆ ಮೇರೆಗೆ ಭೋಜೇಗೌಡರಿಗೆ ಜೋಶಿ ಅವರ ಪರ ವಕೀಲ ಅರುಣ ಜೋಶಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.
೪೦ ವರ್ಷಗಳಿಂದ ಸಾಮಾಜಿಕ ಸೇವೆ ಹಾಗೂ ರಾಜಕೀಯದಲ್ಲಿ ಇರುವ ಜೋಶಿ ಅವರ ಮೇಲೆ ಈ ರೀತಿ ಆಧಾರ ರಹಿತ ಆರೋಪ ಮಾಡುವುದು ಸಲ್ಲದು. ಕೂಡಲೇ ನೋಟಿಸ್ ಮುಟ್ಟಿದ ೭ ದಿನಗಳ ಒಳಗಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

Previous articleತಾಯಿ, ಮಗಳು ಆತ್ಮಹತ್ಯೆ
Next article500 ರೂ. ಕೊಟ್ಟು ಜನರನ್ನ ಕರ್ಕೊಂಡ ಬನ್ನಿ..!.