‘ಭೀಮಪಲಾಸ’ ಸಂಗೀತ ಸಂಜೆ-ರವೀಂದ್ರ ಯಾವಗಲ್ಲರಿಗೆ ಸನ್ಮಾನ ಫೆ. 3ರಂದು

0
15

ಧಾರವಾಡ: ಭಾರತರತ್ನ ಪಂ. ಭೀಮಸೇನ ಜೋಶಿ ಅವರ ೧೦೧ ಜನ್ಮದಿನದ ಅಂಗವಾಗಿ ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ‘ಭೀಮಪಲಾಸ’ ಸಂಗೀತ ಸಂಜೆ ಕಾಯಕ್ರಮವನ್ನು ಹಮ್ಮಿಕೊಂಡಿವೆ. ಫೆ. ೦೩ರಂದು ಸಂಜೆ ೫.೪೫ಕ್ಕೆ ಸೃಜನಾ ರಂಗಮAದಿರಲ್ಲಿ
ಸನ್ಮಾನ-ಗಾಯನ-ವಾದನದ ಸಮಾರಂಭ ಜರುಗಲಿದೆ.
ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಪಂ. ರವೀಂದ್ರ ಯಾವಗಲ್ಲ ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಅರವಿಂದ ಬೆಲ್ಲದ, ಮಹಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಡಾ. ರಮಾಕಾಂತ ಜೋಶಿ ಹಾಗೂ ಕ್ಷಮತಾ ಸಂಸ್ಥೆಯ ಅಧ್ಯಕ್ಷ ಗೋವಿಂದ ಜೋಶಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
​ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಅನಾಮಿಕಾ ಅವರ ಸಹಕಾರದೊಂದಿಗೆ ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ ಪಂ. ರಾಜೇಂದ್ರ ಪ್ರಸನ್ನ ಅವರಿಂದ ಬಾನ್ಸುರಿ ವಾದನ ಹಾಗೂ ಯುವ ಕಲಾವಿದ ದರ್ಶನ ಮೆಳವಂಕಿ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಪಂ. ರವೀಂದ್ರ ಯಾವಗಲ್ಲ, ಡಾ. ಶ್ರೀಹರಿ ದಿಗ್ಗಾವಿ ತಬಲಾ ಹಾಗೂ ಬಸವರಾಜ ಹಿರೇಮಠ ಸಂವಾದಿನಿ ಸಾಥ್ ಸಂಗತ್ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ವಿವಿಡ್ಲಿಪಿಯ ಮೂಲಕ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.

Facebook Live: https://www.facebook.com/vividlipi/live

Youtube Live: https://www.youtube.com/vividlipi/live

*ಪಂ. ರಾಜೇಂದ್ರ ಪ್ರಸನ್ನ, ನವದೆಹಲಿ *(ಬಾನ್ಸುರಿ ವಾದನ)
ವಾರಣಾಸಿ ಮೂಲದ ರಾಜೇಂದ್ರ ಪ್ರಸನ್ನ ಅವರು ದೇಶಕಂಡ ಪ್ರತಿಭಾವಂತ, ಪ್ರಬುದ್ಧ ಬಾನ್ಸುರಿ ವಾದಕರಲ್ಲಿ ಒಬ್ಬರು. ಇವರ ಕಲೆಯ ದಾಹ ಕೇವಲ ಬಾನ್ಸುರಿಗೆ ಸೀಮಿತಗೊಂಡಿದ್ದಲ್ಲ. ಅತ್ಯುತ್ತಮ ಶಹನಾಯಿ ವಾದಕರೂ ಕೂಡ. ಸುವಿಖ್ಯಾತ ಸಂಗೀತಗಾರರ ಮನೆತನದ ಹಿನ್ನೆಲೆಯುಳ್ಳ ರಾಜೇಂದ್ರ ಅತೀ ಕಡಿಮೆ ವಯಸ್ಸಿನಲ್ಲಿ ಬಾನ್ಸುರಿ ನುಡಿಸುವಲ್ಲಿ ಪ್ರಾವೀಣ್ಯತೆ ಸಾಧಿಸಿದವರು. ಬಾನ್ಸುರಿ ಹಾಗೂ ಶಹನಾಯಿ ಕಲಿಕೆಯನ್ನು ತಂದೆ ಪಂ. ರಘುನಾಥ ಪ್ರಸನ್ನ, ಚಿಕ್ಕಪ್ಪಂದಿರಾದ ಪಂ. ಭೋಲಾನಾಥ ಮತ್ತು ವಿಷ್ಣು ಪ್ರಸನ್ನ ಅವರಲ್ಲಿ ಆಳವಾದ ಬಾನ್ಸುರಿ ವಾದನದ ಅಧ್ಯಯನಪಡೆದು ಅತ್ಯಂತ ಕಡಿಮೆ ಸಮಯದಲ್ಲಿ ಪ್ರತಿಭಾವಂತ ಬಾನ್ಸುರಿ ವಾದಕರಾಗಿ ಹೊರಹೊಮ್ಮಿದರು. ವಾರಣಾಸಿಯಿಂದ ನವದೆಹಲಿಗೆ ಸ್ಥಳಾಂತರಗೊAಡ ನಂತರ ಉ. ಹಫೀe಼ï ಅಹ್ಮದ ಖಾನ್ ಹಾಗೂ ಉ. ಸರ್ಫರಾe಼ï ಹುಸೇನ ಖಾನ್ ಅವರಲ್ಲಿ ತಮ್ಮ ಸಂಗೀತಾಧ್ಯಯನವನ್ನು ಮುಂದುವರಿಸಿದರು. ದೇಶ ವಿದೇಶಗಳಲ್ಲಿ ತಮ್ಮ ಬಾನ್ಸುರಿಯ ನಿನಾದವನ್ನು ಹರಿಸಿರುವ ರಾಜೇಂದ್ರ ಅವರು ವಿವಿಧ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ದರ್ಶನ ಮೆಳವಂಕಿ (ಗಾಯನ)

ಮೂಲತಃ ವಿಜಯಪುರದ ದರ್ಶನ ಮೆಳವಂಕಿ ಯುವ ಭರವಸೆಯ ಹಿಂದುಸ್ತಾನಿ ಗಾಯಕ. ಹುಬ್ಬಳ್ಳಿಯ ಪ್ರತಿಷ್ಠಿತ ಗಂಗೂಬಾಯಿ ಹಾನಗಲ್ಲ ಗುರುಕುಲದಲ್ಲಿ ಸಂಗೀತಾಭ್ಯಾಸ ಮಾಡುತ್ತಿರುವ ದರ್ಶನ ಒಳ್ಳೆಯ ಪ್ರತಿಭೆ. ಪಂಜಾಬನಲ್ಲಿ ನಡೆ ಸದ್ಗುರು ಜಗಜಿತ ಸಿಂಗ್ ಶಾಸ್ತಿçÃಯ ಸಂಗೀತ ಸ್ಪರ್ಧೆ, ಗದುಗಿನ ಪಂಚಾಕ್ಷರಿ ಸಂಸ್ಥೆಯ ಹಿಂದುಸ್ತಾನಿ ಶಾಸ್ತಿçÃಯ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಝಿ ವಾಹಿನಿಯ ಸರೆಗಮಪ ಸ್ಪರ್ಧೆಯಲ್ಲಿ ರನ್ನರ್ ಅಪ್ ಹಾಗೂ ದ್ವಿತೀಯ ಸ್ಥಾನ ಗಳಿಸಿ ಎಲ್ಲರಿಂದ ಸೈ ಎನಿಸಿಕೊಂಡಿರುವ ದರ್ಶನ ವಿಜಯಪುರದಲ್ಲಿ ಬಿ.ಕಾಂ ಅಧ್ಯಯನ ಮಾಡುತ್ತಿದ್ದಾರೆ.

Previous articleಮಂತ್ರಾಲಯಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಟಿ
Next articleಶತಮಾನದ ಸಂತ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ