`ಬೋಗಸ್ ಕಾರ್ಡ್ ನೆಪದ ಕಾಂಗ್ರೆಸ್’

0
19
ರಾಮುಲು

ಸಿರುಗುಪ್ಪ: ದೇಶದಲ್ಲಿ ಕಾಂಗ್ರೆಸ್‌ನ್ನು ದುರ್ಬಿನ್ ಹಾಕಿ ಹುಡುಕಿದರೂ ಸಿಗದಂತಾಗಿದೆ. ಇಂದು ಬೋಗಸ್ ಗ್ಯಾರಂಟಿ ಕಾರ್ಡ್ ನೆಪವನ್ನೊಡ್ಡುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ, ಸಚಿವ ಬಿ.ಶ್ರೀ ರಾಮುಲು ತಿಳಿಸಿದರು.
ನಗರದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ತಾಲೂಕು ಕ್ರೀಡಾಂಗಣ, 51 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದ ಕುಡಿಯುವ ನೀರಿನ ಕೆರೆ, ಹಾಗೂ 2.8 ಕೋಟಿ ಮೊತ್ತದಲ್ಲಿ ನಿರ್ಮಿಸಿದ ಪೊಲೀಸ್ ಠಾಣೆ ಉದ್ಘಾಟಿಸಿದರು. ಶಾಸಕ ಎಂ.ಎಸ್.ಸೋಮಲಿಂಗಪ್ಪ, ಇಂದು ತಾಲೂಕಿನಲ್ಲಿ ಖಾಸಗಿ ಶಾಲೆ ಮೀರಿಸುವ ಸುಸಜ್ಜಿತ ಶಾಲಾ ಕಾಲೇಜ್ ಕಟ್ಟಡಗಳು, ಆಸ್ಪತ್ರೆಗಳು, ರಸ್ತೆಗಳು, ಸೇತುವೆಗಳು, ಕುಡಿಯುವ ನೀರಿನ ಕೆರೆಗಳು, ನಿರ್ಮಾಣವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲ ರೈತರಿಗೆ ನೀರು ಕೊಡುವುದು ಮತ್ತು ಅವರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವುದೆ ನಮ್ಮ ಸಂಕಲ್ಪವಾಗಿದೆ. ಅದಕ್ಕಾಗಿ ಜೀವಮಾನವಿಡಿ ಶ್ರಮಿಸಲಾಗುವುದೆಂದು ತಿಳಿಸಿದರು.

Previous articleಪತ್ನಿಯಿಂದಲೇ ಕೊಲೆಯಾದ ಇಬ್ಬರ ಹೆಂಡಿರ ಪೊಲೀಸ್‌
Next articleಬೆಲ್ಲದ ಬದಲು ನನಗೆ ಟಿಕೆಟ್‌ ಕೊಡಿ ಎಂದ ಮೇಯರ್‌