ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ವಿಶಾಲ್ ದರ್ಗಿ ಮೇಯರ್ ಹಾಗೂ ಶಿವಾನಂದ ಪಿಸ್ತಿ ಉಪಮೇಯರ್ ಆಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಇದಕ್ಕೂ ಮುನ್ನ 2010ರಲ್ಲಿ ಮೊದಲ ಬಾರಿಗೆ ಬಿಜೆಪಿಯ ಪಾಲಿಕೆ ಸದಸ್ಯರೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದರು. ಆದರೆ ಅಂದು ಕೆಲ ಕಾಂಗ್ರೆಸ್ ಸದಸ್ಯರು ಬಿಜೆಪಿ ಬೆಂಬಲ ನೀಡಿದ್ದರು. ಈ ಬಾರಿ ಸ್ವಂತ ಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಇಂದು ಚುನಾವಣೆಗೆ ಹಾಜರಾದ 65 ಸದಸ್ಯರ ಪೈಕಿ ಬಿಜೆಪಿ 33 ಮತ ಪಡೆದರೆ, ಕಾಂಗ್ರೆಸ್ 32 ಮತಗಳನ್ನು ಪಡೆದಿದೆ.
























