ಬಿಜೆಪಿ ಅಭ್ಯರ್ಥಿ ಪರ ದರ್ಶನ್ ಪ್ರಚಾರ

0
16

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಆರ್.ಎಸ್‌ನಲ್ಲಿ ಬೃಹತ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಚಿತ್ರನಟ ದರ್ಶನ ಸಚ್ಚಿದಾನಂದ ನನ್ನ ಆತ್ಮೀಯರು ಅವರು ರಾಜಕೀಯ ಜೀವನಕ್ಕೆ ಬರುವ ಮುನ್ನವೇ ಸಾಮಾಜಿಕವಾಗಿ‌ ಹತ್ತಾರು ತರಹದ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು.
ಅಧಿಕಾರಕ್ಕೆ ಬರುವ ಮುನ್ನವೇ ಅವರ ಸಾಮಾಜಿಕ‌ ಸೇವೆಗಳನ್ನು ನೀವು ನೋಡಿದ್ದೀರ. ಇನ್ನು ಅವರು ಅಧಿಕಾರಕ್ಕೆ ಬಂದರೆ ಇನ್ನೆಷ್ಟು ಸೇವೆ ಮಾಡಬಹುದು ಎಂಬುದನ್ನು‌ ಅರಿತು‌ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಮಾತನಾಡಿ‌, ನಾನು ನಿಮ್ಮ ಮನೆಯ ಮಗ. ಒಂದೇ ಗ್ರಾಮದ ಎರಡು ಕುಟುಂಬಗಳಿಗೆ ಹೆಚ್ಚು ಅಧಿಕಾರ ನೀಡಿದ್ದೀರಿ. ಒಮ್ಮೆ ನನಗೆ ಅವಕಾಶ ಕೊಡಿ. ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಸದಾ‌ ದುಡಿಯುವುದಾಗಿ ಭರವಸೆ ನೀಡಿದರು. ಬಳಿಕ ಹುಲಿಕೆರೆ, ಬೆಳಗೋಳ, ಪಾಲಹಳ್ಳಿ‌ ಶ್ರೀರಂಗಪಟ್ಟಣ, ಕೆ.ಶೆಟ್ಟಹಳ್ಳಿ ಸೇರಿದಂತೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಬೃಹತ್ ರ್ಯಾಲಿ ನಡೆಸಿದರು. ಬಿಜೆಪಿ ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಉಪಸ್ಥಿತರಿದ್ದು ಅಭ್ಯರ್ಥಿಯ ಪರ ಮತ ಪ್ರಚಾರ ನಡೆಸಿದರು.

Previous articleಸರಣಿ ಅಪಘಾತ: ನಾಲ್ವರಿಗೆ ಗಾಯ
Next articleಜಗಳೂರು ಜಾತ್ರೆ : ಗ್ರಾಮಸ್ಥರ ಮೇಲೆ ಲಾಠಿ ಪ್ರಹಾರ