ಫೆ. 14 ರಂದು ನವಲಗುಂದಕ್ಕೆ ಕುಮಾರಸ್ವಾಮಿ ಆಗಮನ

0
17

ಹುಬ್ಬಳ್ಳಿ: ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ನೇತೃತ್ವದಲ್ಲಿ ಫೆ.‌ 14 ರಂದು ಪಂಚರತ್ನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಗ್ರಾಮಾಂತರ ಜಿಲ್ಲೆಯ ಅದ್ಯಕ್ಷ ಬಿ. ಬಿ. ಗಂಗಾಧರಮಠ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಜಿಲ್ಲೆಯ ಭಾಗದಲ್ಲಿ ಪಂಚರತ್ನ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಕುಮಾರಣ್ಣ ಬೈಲಹೊಂಗಲ ಮೂಲಕ ನವಲಗುಂದ ವಿಧಾನಸಭಾ ಕ್ಷೇತ್ರದ ಶಿರೂರು ಗ್ರಾಮಕ್ಕೆ ಆಗಮಿಸಲಿದ್ದು, ಈ ವೇಳೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದರು.
ಫೆ.14 ರಂದು ಕಾಲವಾಡ, ಅರೆಹುರಹಟ್ಟಿ, ಯಮನೂರಿನಲ್ಲಿ ಸಭೆ ನಡೆಸಲಾಗುವುದು. ಬಳಿಕ ನವಲಗುಂದದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲಾಗುವುದು ಎಂದರು. ಮೊರಬದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಅಳಗವಾಡಿಯಲ್ಲಿ ರೈತ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಾಗುವುದು, ನಂತರ ಹೆಬ್ಬಾಳ, ಜಾವೂರು, ಜನರನ್ನು ಕುಮಾರಸ್ವಾಮಿ ಸಂಪರ್ಕ ಮಾಡಲಿದ್ದಾರೆ. ರಾತ್ರಿ ಹೆಬಸೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡುವರು. ಫೆ.14 ರಂದು ಕಾಲವಾಡ, ಅರೆಹುರಹಟ್ಟಿ, ಯಮನೂರಿನಲ್ಲಿ ಸಭೆ ನಡೆಸಲಾಗುವುದು. ಬಳಿಕ ನವಲಗುಂದದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲಾಗುವುದು ಎಂದು‌ ಹೇಳಿದರು. ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ್ ಹುಣಸಿಮರದ , ಮುಖಂಡರಾದ ಇಸ್ಮಾಯಿಲ್ ಕಾಲೇಬುಡ್ಡಿ ಇತರರು ಇದ್ದರು.

Previous articleನಾಲ್ಕು ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ
Next articleರಾಜ್ಯದಲ್ಲಿ 50 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ