ನಮ್ಮ ಕುಟುಂಬಕ್ಕೆ ನಾಲ್ಕು ಟಿಕೆಟ್ ಬೇಕಾದ್ರು ಕೊಡ್ತಾರೆ: ಶಾಮನೂರು ಶಿವಶಂಕರಪ್ಪ

0
15
ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಕೇಳಿದರೆ ನಮ್ಮ ಮನೆಗೆ ನಾಲ್ಕು ಟಿಕೆಟ್ ಬೇಕಾದರೂ ಕೊಡುತ್ತಾರೆ ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಕೊಡುವ ನಿಯಮವೇನಾದರೂ ಕಾಂಗ್ರೆಸ್‌ನಲ್ಲಿ ಜಾರಿಯಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಮನೂರು, ಅದೆಲ್ಲ ಏನೂ ಇಲ್ಲ. ನಮ್ಮ ಕುಟುಂಬದವರು ಕೇಳಿದರೆ ಎರಡಲ್ಲ ನಾಲ್ಕು ಟಿಕೆಟ್ ಬೇಕಾದರೂ ಕೊಡುತ್ತಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಗಳಾದವರು ಕೆಪಿಸಿಸಿಗೆ ಅರ್ಜಿ ಸಲ್ಲಿಸುವ ನಿಯಮ ಇದ್ದು, ಇದಕ್ಕೆ ನ. 21 ಕೊನೇ ದಿನವಾಗಿತ್ತು. ಆದರೆ , ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಅರ್ಜಿ ಸಲ್ಲಿಕೆ ಮಾಡಿಲ್ಲವಲ್ಲ ಅವರಿಗೆ ಟಿಕೆಟ್ ಸಿಗುವುದಾ ಅಥವಾ ಅವರು ಸ್ಪರ್ಧೆ ನಡೆಸುವರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಮನೂರು, ಅವರು ಸ್ಪರ್ಧೆ ಮಾಡುತ್ತಾರೋ ಇಲ್ಲವೋ, ಅರ್ಜಿ ಏಕೆ ಹಾಕಿಲ್ಲ ಎಂಬ ಬಗ್ಗೆ ಅವರನ್ನೇ ಕೇಳಬೇಕು. ನಾವು ಯಾರೂ ಆಂತರಿಕವಾಗಿ ಈ ಬಗ್ಗೆ ಮಾತನಾಡುವುದಿಲ್ಲ. ಇದೆಲ್ಲ ಅವರವರ ಸ್ವಂತ ಅಭಿಪ್ರಾಯ. ಈ ವಿಚಾರವಾಗಿ ನನ್ನ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನೇ ಕೇಳಿ ಎಂದು ಉತ್ತರಿಸಿದರು.

Previous articleಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್
Next articleಮತಾಂಧ ಶಕ್ತಿಗಳನ್ನು ಮಟ್ಟಹಾಕಲು ಕ್ರಮ: ಗೃಹಸಚಿವ