ಚುನಾವಣಾಧಿಕಾರಿಗಳು ಪರಿಶೀಲಿಸಿ ಸೂಕ್ತ ಹೆಸರುಗಳನ್ನು ಸೇರಿಸುತ್ತಾರೆ: ಶಾಸಕ ಅರವಿಂದ ಬೆಲ್ಲದ್‌

0
20
Arvind bellad

ಹುಬ್ಬಳ್ಳಿ: ಹುಬ್ಬಳ್ಳಿ – ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ್‌ ಮತದಾರರ ಹೆಸರನ್ನು ಡಿಲೀಟ್‌ ಮಾಡಿಸಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಮತದಾರರನ್ನು ಡಿಲೀಟ್ ಮಾಡಿಸಿದ್ದು ನಾವಲ್ಲ. ನಮ್ಮ ಮೇಲೆ ಆರೋಪ ಮಾಡುವವರು ದಾಖಲೆ ತಂದು ತೋರಿಸಲಿ ಎಂದಿದ್ದಾರೆ. ಮತದಾರರ ಪಟ್ಟಿ ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಖಾಸಗಿ ಏಜೆನ್ಸಿಗಳು ಎಲ್ಲೆಡೆ ಸರ್ವೇ ಮಾಡುತ್ತಿವೆ. ನಮ್ಮ ಪಕ್ಷದಿಂದಲೂ ಸರ್ವೇ ಮಾಡಿ, ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಆ್ಯಪ್ ಮೂಲಕ ಸರ್ವೇ ಮಾಡುತ್ತಿದ್ದೇವೆ, ಹೊಸ ಓಟರ್‌ಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಚುನಾವಣಾಧಿಕಾರಿಗಳು ಪರಿಶೀಲಿಸಿ ಸೂಕ್ತ ಹೆಸರುಗಳನ್ನು ಸೇರಿಸುತ್ತಾರೆ. ಸೇರ್ಪಡೆ, ತೆಗೆದುಹಾಕುವುದು ಸಹಜ ಪ್ರಕ್ರಿಯೆ. ಒಮ್ಮೆ ಹೆಸರು ಕೈಬಿಟ್ಟಿದ್ದರೆ ಮರಳಿ ಸೇರಿಸಲು ಅವಕಾಶವಿದೆ ಎಂದರು.

Previous articleಕನ್ನಡಿಗನ ಮೇಲೆ ಹಲ್ಲೆ: ತನಿಖೆಗೆ ಆದೇಶ
Next articleಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ: ಸಿಎಂ ಬೊಮ್ಮಾಯಿ