ಖಾಸಗಿ ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ

0
21
accident

ಶಿವಮೊಗ್ಗ: ಖಾಸಗಿ ಬಸ್‌ಗಳ ನಡುವೆ ಅಪಘಾತ ಸಂಭವಿಸಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ಬಳಿ ನಡೆದಿದೆ.
ಶ್ರೀನಿವಾಸ ಮತ್ತು ಲಕ್ಷ್ಮಿ ಹೆಸರಿನ ಖಾಸಗಿ ಬಸ್ಸುಗಳ ಮುಖಾಮುಖಿ ಡಿಕ್ಕಿಯಾಗಿದೆ. ಶೂರಡಿ ಸಮೀಪದ ಕುಮದ್ವತಿ ಸೇತುವೆಯ ಮೇಲೆ ನಡೆದ ಅಪಘಾತ ಸಂಭವಿಸಿದ್ದು, ಅಪಘಾತವಾದ ರಭಸಕ್ಕೆ ಇಡೀ ಬಸ್‌ಗಳ ಅರ್ಧ ಭಾಗವೇ ಸಂಪೂರ್ಣ ನಜ್ಜುಗುಜ್ಜಾಗಿವೆ. ಕುಂಸಿ ಪೊಲೀಸ್ ಠಾಣೆಯ ಪ್ರಕರಣ ನಡೆದಿದೆ.

Previous articleಸುಕುಮಾರ ಶೆಟ್ಟಿ ಉಚ್ಚಾಟನೆ ಪತ್ರ ನಕಲಿ: ಕುಯಿಲಾಡಿ ಸ್ಪಷ್ಟನೆ
Next articleಬಾವಿಗೆ ಬಿದ್ದ ಓರ್ವನನ್ನು ರಕ್ಷಿಸಲು ಹೋಗಿ ಇನ್ನಿಬ್ಬರೂ ಜಲಸಮಾಧಿ