ಕುಷ್ಟಗಿಯಲ್ಲಿ ನಾಪತ್ತೆ-ಮೆಜೆಸ್ಟಿಕ್‌ನಲ್ಲಿ ಪತ್ತೆ

0
10

ಕುಷ್ಟಗಿ: ಡಿ. 1 ರಂದು ನಾಪತ್ತೆಯಾಗಿದ್ದ ಪಟ್ಟಣದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಕೊಂಡಗುರಿ ಇದೀಗ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಹತ್ತಿರ ಪತ್ತೆಯಾಗಿದ್ದಾರೆ.
ಸಾಮಾಜಿಕ ಜಾಲತಾಣದ ಸುಳಿವಿನಿಂದಾಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್‌ಐ ಮೌನೇಶ್ ರಾಥೋಡ್ ಅವರು ಇವರನ್ನು ಪತ್ತೆ ಹಚ್ಚಿದ್ದಾರೆ.
ಡಿ. 1ರ ಬೆಳಗ್ಗೆ ಅವರ ಸ್ವಗ್ರಾಮ ಹಿರೇಅರಳಹಳ್ಳಿ ಗ್ರಾಮದಿಂದ ಕುಷ್ಟಗಿ ಪಟ್ಟಣಕ್ಕೆ ಆಗಮಿಸಿ ಅಲ್ಲಿಂದ ನಾಪತ್ತೆಯಾಗಿದ್ದರು. ರಾಘವೇಂದ್ರ ಅವರು ತಮ್ಮ ಎರಡೂ ಮೊಬೈಲುಗಳನ್ನು ಸ್ವಿಚ್ ಆಫ್ ಮಾಡಿ ಮನೆಯಲ್ಲಿ ಬಿಟ್ಟು ಹೋಗಿರುವುದರಿಂದ ಆತಂಕಗೊಂಡು ಪತ್ನಿ ವಿದ್ಯಾಶ್ರೀ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಡಿ. 6ರಂದು ಪ್ರಕರಣ ದಾಖಲಿಸಿದ್ದರು.
ಏತನ್ಮಧ್ಯೆ ರಾಘವೇಂದ್ರ ಇಂದು ಸಂಜೆ ವೇಳೆಗೆ ಕುಷ್ಟಗಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.

Previous articleವಾರಾಂತ್ಯದೊಳಗೆ TET ಫಲಿತಾಂಶ
Next articleಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ರಿಷಬ್ ಶೆಟ್ಟಿ