ಕಾಂಗ್ರೆಸ್ ಕಚ್ಚಾಟದಿಂದ ಸರ್ಕಾರ ಪತನ

0
21

ಕಲಬುರಗಿ: ನಾವು ಯಾರೂ ಬಿಜೆಪಿ ಆಪರೇಷನ್ ಮಾಡುವುದಿಲ್ಲ, ಕಾಂಗ್ರೆಸ್ ಪಕ್ಷದ ಒಳ ಕಚ್ಚಾಟದಿಂದಲೇ ಸರ್ಕಾರ ಉರುಳಿ ಬೀಳುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಭವಿಷ್ಯ ನುಡಿದರು.
ಗರುಡ ಚಲನಚಿತ್ರದ ಪ್ರಚಾರಕ್ಕೆಂದು ನಗರಕ್ಕೆ ಆಗಮಿಸಿದ ವೇಳೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬ್ಯಾಲೆನ್ಸ್ ತಪ್ಪಿದೆ. ಸಿಎಂ-ಡಿಸಿಎಂ ಅವರ ದಿನಕ್ಕೊಂದು ಹೇಳಿಕೆ, ಜನರಿಗೆ ಸುಳ್ಳು ಹೇಳುವುದರಲ್ಲಿ ಮಗ್ನರಾಗಿದ್ದಾರೆ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದಲ್ಲಿ ಆರ್ಥಿಕ ದಿವಾಳಿಯಿಂದ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Previous articleಅನುಮಾನಾಸ್ಪದ ಎರಡು ಪೆಟ್ಟಿಗೆ ಪತ್ತೆ
Next articleಪಿಎಸ್‌ಐ ಅಮಾನತಿಗೆ ಆದೇಶ