ಐ ಸ್ಟ್ಯಾಂಡ್ ವಿತ್ ಸತೀಶ ಅಭಿಯಾನ

0
13
SATISH

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಅವರು ನೀಡಿದ `ಹಿಂದೂ ಶಬ್ದ ಅಶ್ಲೀಲ’ ಎಂಬ ಹೇಳಿಕೆ ಈಗ ದೇಶವ್ಯಾಪಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸತೀಶ ಅಭಿಮಾನಿಗಳು ಐ ಸ್ಟ್ಯಾಂಡ್ ವಿತ್ ಸತೀಶ ಜಾರಕಿಹೊಳಿ ಅಭಿಯಾನ ಜೋರಾಗಿ ನಡೆಸಿದ್ದಾರೆ.
ಸತೀಶ ಜಾರಕಿಹೊಳಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದವರು ಸಮರ್ಥಿಸಿಕೊಳ್ಳುತ್ತಿಲ್ಲ. ಇದನ್ನೆ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ಸತೀಶ ಜಾರಕಿಹೊಳಿ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎನ್ನುವ ಒತ್ತಡ ಹಾಕುತ್ತಿದ್ದಾರೆ.
ನಗರದಲ್ಲಿ ಮಂಗಳವಾರ ಸತೀಶ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ, ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನಾನು ಸಂಶೋಧನೆ ಮಾಡಿ ಹೇಳಿಕೆ ನೀಡಿಲ್ಲ. ವಿಕಿಪೀಡಿಯದಲ್ಲಿರುವುದನ್ನು ಹೇಳಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ ಮೇಲೆ ಸತೀಶ ಜಾರಕಿಹೊಳಿ ಅಭಿಮಾನಿಗಳು ಅವರ ಪರವಾಗಿ ಐ ಸ್ಟ್ಯಾಂಡ್ ವಿತ್ ಸತೀಶ ಜಾರಕಿಹೊಳಿ ಎಂಬ ಅಭಿಯಾನ ನಡೆಸಿ ವಿರೋಧಿಗಳಿಗೆ ಟಕ್ಕರ್ ಕೊಡುತ್ತಿದ್ದಾರೆ.

Previous articleಅವಕಾಶ ಸಿಕ್ಕರೆ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ: ಸಿದ್ದೇಶ್ವರ್
Next articleಸಿದ್ದರಾಮಯ್ಯ ಕ್ಷೇತ್ರದಲ್ಲಿ ಡಿಕೆಶಿ ಸಂಚಾರ