ಬಳ್ಳಾರಿ: ನಿನ್ನ ಋಣ ತೀರಿಸುವುದು ಹೇಗೆ ಎಂದು ಕಣ್ಣೀರಿಟ್ಟಿದ್ದ ಸೊಸೆ(ಜನಾರ್ಧನ ರೆಡ್ಡಿ ಪತ್ನಿ), ಮಗಳು ಇದೀಗ ಇದೆಲ್ಲವನ್ನೂ ಮರೆತಿದ್ದಾರೆ ಎಂದು ಬಿಜೆಪಿ ಶಾಸಕ, ರೆಡ್ಡಿ ಸಹೋದರ ಜಿ. ಸೋಮಶೇಖರ ರೆಡ್ಡಿ ಭಾವುಕವಾಗಿ ನುಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ೨೦೧೩ರಲ್ಲಿ ಸಹೋದರ ಜನಾರ್ದನ ರೆಡ್ಡಿ ಅವರ ಪ್ರಕರಣದಲ್ಲಿ ಜೈಲಿಗೆ ಹೋದ ಕಾರಣ ಚುನಾವಣೆಯಿಂದ ಹಿಂದೆ ಸರಿದಿದ್ದೆ. ಆದೆ, ಈ ಬಾರಿ ಹಾಗೆ ಆಗೊಲ್ಲ. ನನ್ನ ತಮ್ಮನಿಗಾಗಿ ನಾನು ಐದು ವರ್ಷ ಸುಮ್ಮನೆ ಕುಳಿತೆ. ನನ್ನ ಋಣ ಅವರ ಮೇಲಿದೆ. ಅವರಿಗೆ ತಿಳಿಯಬೇಕು, ಅವರಿಗಾಗಿ ನಾನೂ ೬೫ ದಿನಗಳ ಕಾಲ ಜೈಲಿಗೆ ಹೋಗಿ ಬಂದೆ ಎಂದಿದ್ದಾರೆ.
ನಾನು ಜೈಲಿಗೆ ಹೋಗಿ ಬಂದಾಗ ಸೊಸೆ ಅರುಣಾ ಲಕ್ಷ್ಮೀ ‘ಭಾವ ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮ ಋಣ ತೀರಿಸಲು ಆಗೋಲ್ಲ’ ಎಂದಿದ್ದರು. ಅದೇ ರೀತಿ ಪುತ್ರಿ ಬ್ರಹ್ಮಣಿ ಸಹ ‘ದೊಡಪ್ಪಾ ನಿನ್ನ ಋಣ ಹೇಗೆ ತೀರಸಬೇಕು’ ಎಂದು ಭಾವುಕರಾಗಿ ನುಡಿದಿದ್ದರು. ಇದೀಗ ಅವರೇ ನನ್ನ ವಿರುದ್ಧವೇ ಚುನಾವಣಾ ಅಖಾಡಕ್ಕಿಳಿಯಲು ಮುಂದಾಗಿದ್ದಾರೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ನನಗೆ ಕಸಾಪೂರ್ ಆಂಜಿನೇಯ, ಬಳ್ಳಾರಿ ನಗರ ಅದಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ, ಕೊಟೆ ಮಲ್ಲೇಶ್ವರ ಆಶೀರ್ವಾದ ಇದೆ. ಕ್ಷೇತ್ರದ ಜನರ ಆರ್ಶಿವಾದ ಬೆಂಬಲವಿದೆ. ಗೆಲ್ಲುವ ವಿಶ್ವಾಸ ನನಗಿದೆ. ಹಾಗಾಗಿ ನಾನು ಈ ಬಾರಿ ಕಣಕ್ಕೆ ಇಳಿಯುವುದು ಪಕ್ಕಾ ಎಂಚು ಅವರು ತಿಳಿಸಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸಹೋದರ ಗಾಲಿ ಜನಾರ್ಧನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧೆ ಮಾಡಿದರೂ ನಾನು ಹಿಂದೆ ಸರಿಯುವುದಿಲ್ಲ. ನನಗೆ ಟಿಕೆಟ್ ಸಿಗುವುದು ಪಕ್ಕಾ ಇದೆ. ಒಂದು ವೇಳೆ ಟಿಕೆಟ್ ಸಿಗದೇ ಹೋದರೆ ಪಕ್ಷೇತರನಾಗಿ ಸ್ಪರ್ಧೆಮಾಡುವೆ ಎಂದು ಅವರು ತಿಳಿಸಿದರು.


























