ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ, ಕ್ಯನ್ಸರ್‌ ಪ್ರತಿಬಂಧಕ!

0
37

ಅಡಿಕೆ ಸಾರಗಳು ಶಕ್ತಿಶಾಲಿ ಕ್ಯಾನ್ಸರ್ ಪ್ರತಿ ಬಂಧಕ ಗುಣಗಳನ್ನು ಹೊಂದಿವೆ ಎಂಬುದು ಸಂಶೋಧನೆಯಿಂದ ಬಯಲಾಗಿದೆ. ಯೆನಪೋಯ ವಿಶ್ವವಿದ್ಯಾನಿಲಯವು ಅಡಿಕೆಯ ಮೇಲೆ ಸಂಶೋಧನಾ ಆಧಾರಿತ ಅಧ್ಯಯನ ನಡೆಸಿ ತಯಾರಿಸಿದ ವರದಿಯಲ್ಲಿ ಇದು ಉಲ್ಲೇಖವಾಗಿದೆ.

ಅಧ್ಯಯನದ ಪ್ರಕಾರ ಅಡಿಕೆಯ ಸಾರಗಳು ಕ್ಯಾನ್ಸ‌ರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ. ಇದು ಸಾಮಾನ್ಯ ಕೋಶಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಈ ಮಹತ್ವದ ಫಲಿತಾಂಶವು, ಸಂಪ್ರದಾಯಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎನ್ನುವುದನ್ನು ಖಚಿತಪಡಿಸಿದೆ. ಕ್ಯಾಂಸ್ಕೋ ಸ್ವಾಗತ: ಈ ವರದಿ ಜನಸಾಮಾನ್ಯರ ನಂಬಿಕೆಗೆ ವೈಜ್ಞಾನಿಕ ಸಾಕ್ಷಾಧಾರವನ್ನು ಒದಗಿಸಿದೆ ಎಂದು ವರದಿಯನ್ನು ಸ್ವಾಗತಿಸಿರುವ ಕ್ಯಾಂಪ್ಯೂ ಅಧ್ಯಕ್ಷ ಎ.ಕಿಶೋರ್ ಕುಮಾ‌ರ್ ಕೊಡ್ಲಿ

ಈ ಅಧ್ಯಯನವು ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿರುವುದು ಕಪೋಲ ಕಲ್ಪಿತ ಎಂಬುದಕ್ಕೆ ಸಾಕ್ಷಿಯಾಗಿದೆ. ಕ್ಯಾಂಪ್ರೊದ ಪ್ರತಿಪಾದನೆಗೆ ಪ್ರಬಲವಾದ ಪುರಾವೆ ಲಭಿಸಿ ದಂತಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಈ ರೀತಿಯ ಸಂಶೋಧನೆ ಆಧಾರಿತ ನಿರ್ಧಾರಗಳು ಅಡಿ ಕೆಯ ಕುರಿತು ಸಮತೋಲನದ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಪುಷ್ಟಿಕರಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದ್ದಾರೆ.

ವರದಿಯಲ್ಲೇನಿದೆ?:

* ಕ್ಯಾನ್ಸ‌ರ್ ಕೋಶಗಳ ವೃದ್ಧಿ ಮತ್ತು ರಡುವಿಕೆಯನ್ನು ಅಡಿಕೆ ಸಾರ ತಡೆಯುತ್ತದೆ ಎಂಬುದು ಪತ್ತೆ
* ಸಾಂಪ್ರದಾಯಿಕವಾಗಿ ಸಂಸ್ಕರಿಸಿ ದ ಅಡಿಕೆಯನ್ನು ಬಳಸಿದಲ್ಲಿ ಆರೋಗ್ಯದಾಯಕ ಲಾಭಗಳಿವೆ
* ಅಡಿಕೆ ಸೇವನೆಯು ಆರೋಗ್ಯಕರ ಕೋಶಗಳಿಗೆ ಯಾವುದೇ ರೀತಿ ಹಾನಿ ಉಂಟು ಮಾಡುವುದಿಲ್ಲ

ಕ್ಯಾನ್ಸರ್‌ಕಾರಕ ಅಲ್ಲ ಎನ್ನುವುದಕ್ಕೆ ಪುರಾವೆ: ಕಿಶೋರ್ ಕುಮಾರ್ ಕೊಡ್ಡಿ, ಕ್ಯಾಂಪ್ಲೋ ಅಧ್ಯಕ್ಷ ಕ್ಯಾನ್ಸ‌ರ್ ಕಾರಕ ಎಂದು ವರ್ಗೀಕರಿಸಿರುವುದು ಕಪೋಲಕಲ್ಪಿತ ಅಂಶಗಳಿಂದ ಕೂಡಿದೆ. ಅಡಿಕೆ ಬಳಕೆ ಸಾಂಸ್ಕೃತಿಕ ಮತ್ತು ಪರಂಪರಾತ್ಮಕ ಮಹತ್ವವನ್ನು ಎತ್ತಿ ಹಿಡಿದಿದೆ. ಇದರಿಂದ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನೂ ಕಾಪಾಡಿದಂತಾಗಿದೆ. ಅಧ್ಯಯನದ ವರದಿ ಅಡಿಕೆ ಕುರಿತ ತಪ್ಪುಕಲ್ಪನೆಗಳನ್ನು ಹೋಗಲಾಡಿಸುತ್ತದೆ. ಕಿಶೋರ್ ಕುಮಾರ್ ಕೊಡ್ಡಿ, ಕ್ಯಾಂಪ್ಲೋ ಅಧ್ಯಕ್ಷ

ಅಡಿಕೆಯನ್ನು ಕ್ಯಾನ್ಸ‌ರ್ ಕಾರಕ ಎಂದು ವರ್ಗೀಕರಿಸಿರುವುದು ಕಪೋಲಕಲ್ಪಿತ ಅಂಶಗಳಿಂದ ಕೂಡಿದೆ. ಅಡಿಕೆ ಬಳಕೆ ಸಾಂಸ್ಕೃತಿಕ ಮತ್ತು ಪರಂಪರಾತ್ಮಕ ಮಹತ್ವವನ್ನು ಎತ್ತಿ ಹಿಡಿದಿದೆ. ಇದರಿಂದ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನೂ ಕಾಪಾಡಿದಂತಾಗಿದೆ. ಅಧ್ಯಯನದ ವರದಿ ಅಡಿಕೆ ಕುರಿತ ತಪ್ಪುಕಲ್ಪನೆಗಳನ್ನು ಹೋಗಲಾಡಿಸುತ್ತದೆ.

Previous articleವಿದೇಶಿ ಕೆಲಸ ಬಿಟ್ಟು ಬಂದು ಬೆಲ್ಲದ ಉದ್ದಿಮೆ ಕಟ್ಟಿದರು!
Next articleಡಿಜಿಟಲ್ ಪಾವತಿಗಳಲ್ಲಿ ಹೊಸ ಯುಗದ ಆರಂಭ

LEAVE A REPLY

Please enter your comment!
Please enter your name here