ಕಿರು ಉದ್ಯಮಿಗಳಿಗೂ ಸಿಗಲಿದೆ Ai ಬೆಂಬಲ

0
60

ನವದೆಹಲಿ: ದೇಶದ ಸಣ್ಣ ಅಂಗಡಿಯವರು ಮತ್ತು ಕಿರು ಉದ್ಯಮಿಗಳು ಈಗ ದೊಡ್ಡ ಮಾರುಕಟ್ಟೆಯ ವ್ಯಾಪಾರಿಗಳೊಂದಿಗೆ ಸ್ಪರ್ಧಿಸಲು ಮತ್ತೊಂದು ಹೊಸ ತಂತ್ರಜ್ಞಾನಿ ಸಹಾಯವನ್ನು ಪಡೆಯಲಿದ್ದಾರೆ. ರಿಲಯನ್ಸ್ ಜಿಯೋ ಸಂಸ್ಥೆ ಸಣ್ಣ ವ್ಯಾಪಾರಿಗಳಿಗೆ ಮೀಸಲಾದ “ಜಿಯೋ ಏಜೆಂಟಿಕ್ ಎಐ” ಸಹಾಯಕವನ್ನು ಪರಿಚಯಿಸಿದೆ. ಈ ನೂತನ ಕೃತಕ ಬುದ್ಧಿಮತ್ತೆಯ ಸಹಾಯಕವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಇದು ಗ್ರಾಹಕರ ಕರೆಗಳನ್ನು ಸ್ವೀಕರಿಸುವುದು, ಆರ್ಡರ್‌ಗಳನ್ನು ತೆಗೆದುಕೊಳ್ಳುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ವಿತರಣೆಗಳನ್ನು ಖಚಿತಪಡಿಸುವುದು, ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸುವುದು ಹಾಗೂ ದೃಢೀಕರಣ ಸಂದೇಶಗಳನ್ನು ಕಳುಹಿಸುವಂತ ಕೆಲಸಗಳನ್ನು ನಿಖರವಾಗಿ ನಿರ್ವಹಿಸುತ್ತದೆ. ಈ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

ಪ್ರಸ್ತುತ ಇದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿಯೂ ಲಭ್ಯವಾಗಲಿದೆ. ಮುಂದಿನ ಹಂತದಲ್ಲಿ 10 ಭಾರತೀಯ ಭಾಷೆಗಳಲ್ಲಿ ಈ ಸೇವೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಜಿಯೋ ಪ್ರಕಾರ, ಇದರ ಉಚ್ಚಾರಣೆ ಮತ್ತು ಸಂಭಾಷಣಾ ಶೈಲಿ ಅಷ್ಟು ನೈಜವಾಗಿದ್ದು, ಗ್ರಾಹಕರು ಮಾನವರ ಜೊತೆ ಮಾತನಾಡುತ್ತಿದ್ದಾರೆಯೋ ಅಥವಾ ಎಐ ಜೊತೆ ಮಾತನಾಡುತ್ತಿದ್ದಾರೆಯೋ ಎಂದು ಗುರುತಿಸುವುದು ಕಷ್ಟ.

ಈ ಎಐ ಸಹಾಯಕವು ಸಣ್ಣ ವ್ಯಾಪಾರಿಗಳಿಗೆ ಹೊಸ ಗ್ರಾಹಕರನ್ನು ತಲುಪಲು ಸಹಾಯ ಮಾಡುವುದರ ಜೊತೆಗೆ, ಉತ್ಪನ್ನಗಳ ಮಾಹಿತಿ ನೀಡುವುದು, ಆಫರ್‌ಗಳನ್ನು ಹಂಚುವುದು ಹಾಗೂ ಆರ್ಡರ್‌ ಪ್ರಕ್ರಿಯೆಗೊಳಿಸುವುದನ್ನೂ ನಿರ್ವಹಿಸುತ್ತದೆ. ಒಂದೇ ಸಮಯದಲ್ಲಿ ಹಲವು ಗ್ರಾಹಕರ ಕರೆಗಳನ್ನು ಸಹ ಸ್ವೀಕರಿಸುವ ಸಾಮರ್ಥ್ಯ ಇದಕ್ಕೆ ಇದೆ.

ಜಿಯೋ ಹೇಳುವಂತೆ, “ಸಣ್ಣ ವ್ಯವಹಾರಗಳಿಗೆ ತಂತ್ರಜ್ಞಾನ ಜ್ಞಾನ ಮತ್ತು ಮೂಲಸೌಕರ್ಯದ ಕೊರತೆ ದೊಡ್ಡ ಅಡೆತಡೆಯಾಗಿದೆ. ಈ ಎಐ ಸಹಾಯಕವು ಡಿಜಿಟಲ್ ಯುಗದಲ್ಲಿ ಅವರ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತದೆ.”

ಬ್ಯಾಕ್ ಎಂಡ್‌ನಲ್ಲಿ ಇದು ಜಿಯೋ ಕ್ಲೌಡ್ ಮತ್ತು ಜಿಯೋ ಟ್ರೂ 5ಜಿ ನೆಟ್‌ವರ್ಕ್ ನ ಸುರಕ್ಷಿತ ಸರ್ವರ್‌ಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಡೇಟಾ ಸುರಕ್ಷತೆ ಮತ್ತು ವೇಗದ ದೃಷ್ಟಿಯಿಂದ ಇದು ಸಣ್ಣ ವ್ಯಾಪಾರಿಗಳಿಗೆ ನಂಬಿಕೆಗೆ ಪಾತ್ರವಾದ ಡಿಜಿಟಲ್ ಸಹಾಯಕವಾಗಲಿದೆ.

Previous articleವಿಶ್ವಶಾಂತಿ ಸೇವಾ ಟ್ರಸ್ಟ್: ಮೂವರು ಸಾಧಕರಿಗೆ ‘ನಮ್ಮನೆ ಪ್ರಶಸ್ತಿ’

LEAVE A REPLY

Please enter your comment!
Please enter your name here