ತಾರಾತಿಗಡಿ: ಅವರಿಬ್ಬರನ್ನು ಬಿಡಿ ನನಗೆ ಕೊಡಿ

0
51

ತಾರಾತಿಗಡಿ: ಸಾ ಹೇಬ್ ಇಲ್ಲಿ ಏನು ನಡೆದಿದೆ ಅಂತ ನಿಮಗೆ ನೀವು ಗೊತ್ತಿಲ್ಲ..ಗೊತ್ತಾದರೆ ಸುಮ್ಮನಿರಲ್ಲ..ನೀವು ಸುಮ್ಮನಿದ್ದರೂ ನಾನು ನನ್ನ ಗ್ಯಾಂಗು ಸುಮ್ಮನಿರಲ್ಲ ಅದಕ್ಕೆ ಸುಮ್ಮನೇ ಯಾಕೆ ಅವರಿಬ್ಬರನ್ನು ಬಿಡಿ..ನನಗೆ ಕೊಡಿ ಎಂದು ಶ್ರೀ…ಶ್ರೀ.. ತಿಗಡೇಸ್ಯಾನಂದ ರು ಅಮ್ಮಾಜಿ…ಅಜ್ಜಾಜಿ…ಹುಡುಗಾಜಿ ಅವರಿಗೆ ಬರೆದಿರುವ ಪತ್ರ ನೋಡಿ ಈಗ ಗದ್ದಲದಲ್ಲಿರುವ ಇಬ್ಬರ ಗ್ಯಾಂಗೂ ಹೌ ಹಾರಿದೆ…

ಈಗ್ಗೆ ಕೆಲವು ದಿನಗಳ ಹಿಂದೆ ಬಂಡೇಸಿ ಗ್ಯಾಂಗಿನವರು ತಿಗಡೇಸಿಯನ್ನು ಮೀಟ್ ಮಾಡಿ…ಅವರನ್ನುಇಳಿಸಲೇಬೇಕು. ಫೆವಿಕಾಲ್ ಆಗಿದಾನೆ ಎಂದು ಬಂಡೇಸಿ ಗ್ಯಾಂಗಿನವರು ಹೇಳಿದರೆ…ಮದ್ರಾಮಣ್ಣೂರ ಗ್ಯಾಂ ಗಿನವರು…ಬಿಡಿಸಬೇಡಿ…ಬುಡಿಸಬ ರೇಡಿ…ಅಣ್ಣನನ್ನು ಬಿಡಿಸಬೇಡಿ…ಅವರಿಗೆ ಕೊಟ್ಟರೆ ಕೋಡಂಗಿ ಗ್ಯಾರಂಟಿ ಎಂದು ಹೇಳುತ್ತಿದ್ದರು…

ಈ ಎರಡೂ ಗ್ಯಾಂಗುಗಳು ಕಣಿ ಕೇಳಲು ಬಂದು ಇದೆಲ್ಲ ಹೇಳಿದಾಗ ಎಲ್ಲವೂ ತಿಗಡೇಸಿಗೆ ಅರ್ಥವಾಗಿತ್ತು. ಇವರಿಬ್ಬರೂ ಹೀಗೆ ಗುದ್ದಾಡಲಿ ಎಂದು ಎರಡೂ ಗ್ಯಾಂಗಿನ ಮಧ್ಯ ಮತ್ತಷ್ಟು ತಂದಿಟ್ಟ… ಈಗ ಮೈ ದಮಾಂಡ್ ನವರು ಅವನೂ ಬ್ಯಾಡ…ಇವನೂ ಬ್ಯಾಡ ಅಂದರೆ ಒಬ್ಬರು ಬೇಕಲ್ಲ…ಅದಕ್ಕೆ ನನ್ನ ಹೆಸರೇ ಬರಲಿ….

ನನ್ನ ನೇಮ್ ಹೇಗಿದೆ ಅವರಿಗೆ ಗೊತ್ತಿಲ್ಲ…ಸಾಗುವ ಸರ್ಪ ಸಲಾಂ ಹಾಕುತ್ತದೆ….ಜನರು ಕಾಲಿಡಿದು ದಕ್ಷಿಣೆ ಕೊಡ್ತಾರೆ..ಹೋದಲ್ಲಿ ಚಪ್ಪಾಳೆ ಹೊಡೀತಾರೆ..ಬಂದಲ್ಲಿ ಸೀಟಿ ಹೊಡೀತಾರೆ. ಮದ್ರಾಮಣ್ಣ..ಬಂಡೇಸಿಗಿಂತ ನಾನೇ ಫೇಮಸ್ಸು….ನನಗೆ ಕೊಡಿ…ನನಗೆ ಕೊಡಿ…ಒಂದು ಬಾರಿ ಕೊಟ್ಟು ನೋಡಿ ಆಮೇಲೆ ನಿಮಗೇ ತಿಳಿಯುತ್ತದೆ ನನ್ನ ಮೋಡಿ ಎಂದು ಡೆಲ್ಲಿ ಮಾಮೂಗೆ ಹೇಳಿದ್ದಾನೆ.

ಇಬ್ಬರ ಮಧ್ಯದಲ್ಲಿ ತಿಗಡಿ ಸ್ವಾಮಿ ಹೊಡೆದ ಚಾನ್ಸ್ ಎಂದು ಎಲ್ಲ ಟಿವಿಗಳಲ್ಲಿ…ಪೇಪರ್ ಗಳಲ್ಲಿ.. ಯು ಟ್ಯೂಬ್ ಗಳಲ್ಲಿ…ಜನರ ಬಾಯಲ್ಲಿ ಓಡಾಡುತ್ತಿದೆ…. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯ ಎಂದು ಪಂ. ಲೇವೇಗೌಡರು ಮೆಲ್ಲಗೇ ಹೇಳಿದರು…ಅದನ್ನು ಕೇಳಿಸಿಕೊಂಡ ಪಂ. ಲೇವಣ್ಣ..ಹೌದಪ್ಪಾಜಿ ಹೌದಪ್ಪಾಜಿ ಎಂದು ಹೇಳುತ್ತಿದ್ದಾರೆ.

Previous articleಉಡುಪಿಯ ಕೃಷ್ಣನ ಅಂಗಳಕ್ಕೆ ಪ್ರಧಾನಿ ಮೋದಿ: ಕಡಲ ತಡಿಯಲ್ಲಿ ಕೇಸರಿ ಸಂಭ್ರಮ!
Next articleಬೆಂಗಳೂರಿಗರೇ ಎಚ್ಚರ: ಕಸಕ್ಕೆ ಬೆಂಕಿ ಇಟ್ಟರೆ ಜೈಲೂಟ ಗ್ಯಾರಂಟಿ!

LEAVE A REPLY

Please enter your comment!
Please enter your name here