ಮಕ್ಕಳಲ್ಲಿ ಐಟಿ ಕ್ಷೇತ್ರದ ಆಸಕ್ತಿಗಾಗಿ: ಗ್ರಾಮಿಣ ಐಟಿ ರಸಪ್ರಶ್ನೆ – 2025

0
81

ಬೆಂಗಳೂರು: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗ (Dept. of Electronics, IT & Bt) ಹಾಗೂ ಕೆ-ಟೆಕ್ (K-Tech) ನ ಸಹಯೋಗದಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಸಹಭಾಗಿತ್ವದಲ್ಲಿ “ಗ್ರಾಮಿಣ ಐಟಿ ರಸಪ್ರಶ್ನೆ 2025” ಆಯೋಜಿಸಲಾಗಿದೆ.

ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಉದ್ದೇಶ — ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಜ್ಞಾನ, ಡಿಜಿಟಲ್ ಅರಿವು ಮತ್ತು ಐಟಿ ಕ್ಷೇತ್ರದ ಆಸಕ್ತಿಯನ್ನು ಬೆಳೆಸುವುದಾಗಿದೆ.

ಭಾಗವಹಿಸಬಹುದಾದವರು: 8ರಿಂದ 12ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು. ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೂ ಭಾಗವಹಿಸುವ ಅವಕಾಶ ನೀಡಲಾಗಿದೆ.

ಸ್ಪರ್ಧೆಯ ಹಂತಗಳು:

1ನೇ ಹಂತ: ಅಕ್ಟೋಬರ್ 23 ರಂದು ಬೆಳಗ್ಗೆ 10 ರಿಂದ 11 ರವರೆಗೆ – ರಾಜ್ಯಮಟ್ಟದ ಪ್ರಾಥಮಿಕ ಪರಿಕ್ಷೆ (ರಾಜ್ಯಾದ್ಯಂತ ಪೂರ್ವೌಭಾವಿ ಪರಿಕ್ಷೆ).

2ನೇ ಹಂತ: ಅಕ್ಟೋಬರ್ 29 ರಂದು ಬೆಳಗ್ಗೆ 11 ಗಂಟೆಗೆ – ಮಧ್ಯಮ ಮಟ್ಟದ ಆಯ್ಕೆ ಪರೀಕ್ಷೆ. (ಜಿಲ್ಲಾ ಮಟ್ಟದಲ್ಲಿ)

3ನೇ ಹಂತ: ನವೆಂಬರ್ ತಿಂಗಳಲ್ಲಿ – ವಲಯ ಮಟ್ಟದ ಸ್ಪರ್ಧೆಗಳು. ಆಯ್ಕೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟದ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ. ನವೆಂಬರ್ 3‌ ರಂದು ಮೈಸೂರಿನಲ್ಲಿ. ನವೆಂಬರ್ 4 ರಂದು ತುಮಕೂರಿನಲ್ಲಿ ಹಾಗೂ ನವೆಂಬರ್ 10 ರಂದು ಧಾರವಾಡದಲ್ಲಿ ನಡೆಯಲಿವೆ.

4ನೇ ಹಂತ: ಬೆಂಗಳೂರಿನಲ್ಲಿ ನಡೆಯುವ ಬೆಂಗಳೂರು ಟೆಕ್ ಶೃಂಗಸಭೆ 2025ರ ಸಂದರ್ಭದಲ್ಲಿ ಅಖಿಲ ಭಾರತ ಮಟ್ಟದ “ಗ್ರ್ಯಾಂಡ್ ಫೈನಲ್” ನಡೆಯಲಿದೆ.

ಕಾರ್ಯಕ್ರಮದ ಪ್ರಮುಖ ಅಂಶವೆಂದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಜಗತ್ತಿನತ್ತ ದಾರಿ ತೋರಿಸುವುದು. ಇದು ಕೇವಲ ಸ್ಪರ್ಧೆ ಅಲ್ಲ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ವಿಜ್ಞಾನೋತ್ಸಾಹ ಬೆಳೆಸುವ ವೇದಿಕೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ: ತಮ್ಮ ಶಾಲೆಯ ಮುಖ್ಯಶಿಕ್ಷಕರು ಅಥವಾ ಜಿಲ್ಲಾ ಶಿಕ್ಷಣಾಧಿಕಾರಿಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ.

Previous articleದೆಹಲಿ: ಸಂಸದರ ವಸತಿ ಸಂಕೀರ್ಣದಲ್ಲಿ ಬೆಂಕಿ ಅವಘಡ
Next article7ಪುಟಗಳ ಡೆತ್ ನೋಟ್: ಯುವಕನ ಸಾವಿನ ಸುತ್ತ ಹನಿಟ್ರ್ಯಾಪ್ ಜಾಲದ ಹುತ್ತ!

LEAVE A REPLY

Please enter your comment!
Please enter your name here