EVM ಬದಲು ಬ್ಯಾಲೆಟ್: ಬಿಜೆಪಿಯವರಿಗೆ ಭಯವ್ಯಾಕೆ.? – ದಿನೇಶ್‌ ಗುಂಡೂರಾವ್‌

0
24

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು EVM ಬದಲು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಇಷ್ಟಕ್ಕೆ ವಿಚಲಿತವಾಗಿರುವ ಬಿಜೆಪಿ ನಾಯಕರು ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ವರ್ತಿಸುವುದು ಯಾಕೆ.? ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ

ಬ್ಯಾಲೆಟ್ ಮೂಲಕ ಚುನಾವಣೆ ನಡೆದರೆ ಮತ ಅಕ್ರಮ ನಡಸಲು ಸಾಧ್ಯವಿಲ್ಲ ಎಂಬುದು ಅವರ ಆತಂಕಕ್ಕೆ ಕಾರಣವೆ.? ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈಗಾಗಲೇ ಹಲವು ಮುಂದುವರಿದ ದೇಶಗಳಲ್ಲಿ EVM ಬದಲು ಬ್ಯಾಲೆಟ್ ಮೂಲಕ ಚುನಾವಣೆ ನಡೆಸಲಾಗುತ್ತಿದೆ. ಇದಕ್ಕೆ ಕಾರಣವೇ EVM ಗಳಲ್ಲಿ ನಡೆಯುತ್ತಿರುವ ಅಕ್ರಮಗಳು. ಇತ್ತೀಚಿಗೆ ರಾಹುಲ್ ಗಾಂಧಿಯವರು ಮತ ಅಕ್ರಮ ಬಯಲಿಗೆಳೆದ ನಂತರ EVM ಮೇಲೆ ಹಾಗೂ ಕೇಂದ್ರ ಚು.ಆಯೋಗದ ಮೇಲೆ ವಿಶ್ವಾಸರ್ಹತೆಯೇ ಕುಂದಿದೆ.

ಬ್ಯಾಲೆಟ್ ಮೂಲಕ ಚುನಾವಣೆ ನಡೆಸುವ ನಿರ್ಧಾರಕ್ಕೆ‌ ನಮ್ಮ ಸರ್ಕಾರ ಮುಂದಾಗಿದ್ದು, ಇದಕ್ಕೆ ರಾಜ್ಯ ಚುನಾವಣಾ ಆಯೋಗವೂ ಸಮ್ಮತಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಸಬೇಕು ಎಂಬುದೇ ನಮ್ಮ ಸರ್ಕಾರದ ಉದ್ದೇಶ. ಹೀಗಿರುವಾಗ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಲು ಬಿಜೆಪಿಯವರಿಗೆ ಭಯವ್ಯಾಕೆ.? ಎಂದು ಪ್ರಶ್ನಿಸಿದ್ದಾರೆ.

Previous articleಮೈಸೂರು ದಸರಾ 2025: ಉದ್ಘಾಟನೆ ವಿವಾದ, ಹೈಕೋರ್ಟ್ ಮೊರೆ ಹೋದ ಪ್ರತಾಪ್ ಸಿಂಹ
Next articleಜಿಎಸ್‌ಟಿ ಪರಿಷ್ಕರಣೆ: ಕಾರು ಖರೀದಿ ಮಾಡೋರಿಗೆ ಸಿಹಿಸುದ್ದಿ

LEAVE A REPLY

Please enter your comment!
Please enter your name here