ಜೈಲಲ್ಲೇ ಇಮ್ರಾನ್ ಖಾನ್‌ ಹತ್ಯೆ? ಪಾಕ್ ಮಾಜಿ ಪ್ರಧಾನಿ ಸಾವಿನ ಬಗ್ಗೆ ಸ್ಫೋಟಕ ಸುದ್ದಿ!

0
11

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬದುಕಿದ್ದಾರಾ ಅಥವಾ ಇಲ್ವಾ? ಈ ಪ್ರಶ್ನೆ ಈಗ ಇಡೀ ಜಗತ್ತನ್ನೇ ಕಾಡುತ್ತಿದೆ. ಜೈಲಿನ ಕತ್ತಲ ಕೋಣೆಯಲ್ಲಿ ಅವರನ್ನು ಪಾಕ್ ಸೇನೆ ಮತ್ತು ಐಎಸ್‌ಐ (ISI) ಸಂಚು ನಡೆಸಿ ಮುಗಿಸಿಬಿಟ್ಟಿದೆಯೇ ಎಂಬ ಆತಂಕಕಾರಿ ಸುದ್ದಿ ದಟ್ಟವಾಗಿ ಹಬ್ಬಿದೆ. ಅಡಿಯಾಲಾ ಜೈಲಿನಿಂದ ಹೊರಬರುತ್ತಿರುವ ಕೆಲವೊಂದು ಅಂತೆ-ಕಂತೆಗಳು ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ.

ಕಳೆದ ಆಗಸ್ಟ್‌ನಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಇತ್ತೀಚೆಗೆ ಅವರ ಸಹೋದರಿಯರು ಅಣ್ಣನನ್ನು ನೋಡಲು ಹೋದಾಗ, ಪಾಕ್ ಪೊಲೀಸರು ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಕೂದಲ ಹಿಡಿದು ಎಳೆದಾಡಿ, ಜೈಲಿನ ಆವರಣದಿಂದ ಹೊರಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರ ನಡುವೆಯೇ, ಇಮ್ರಾನ್ ಖಾನ್ ಅವರದ್ದು ಎನ್ನಲಾದ ಮೃತದೇಹದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಐಎಸ್‌ಐ ಮುಖ್ಯಸ್ಥ ಅಸಿಮ್ ಮುನೀರ್ ನಡೆಸಿದ ‘ರಾಜಕೀಯ ಹತ್ಯೆ’ ಎಂದು ಅಫ್ಘಾನಿಸ್ತಾನ್ ಟೈಮ್ಸ್ ಸೇರಿದಂತೆ ಕೆಲವು ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿವೆ.

ಪಾಕಿಸ್ತಾನದಲ್ಲಿ ಅಂತರ್ಯುದ್ಧದ ಭೀತಿ: ಸದ್ಯ ಪಾಕಿಸ್ತಾನದ ಸ್ಥಿತಿ ಹದಗೆಟ್ಟಿದೆ. ಇಮ್ರಾನ್ ಖಾನ್ ಬಿಡುಗಡೆಗಾಗಿ ಅವರ ಪಕ್ಷ ಪಿಟಿಐ (PTI) ನಡೆಸುತ್ತಿರುವ ‘ಫೈನಲ್ ಕಾಲ್’ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದೆ. ಇಸ್ಲಾಮಾಬಾದ್‌ನಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಏಳು ಬಾರಿ ಪ್ರಯತ್ನಿಸಿದರೂ ಇಮ್ರಾನ್ ಭೇಟಿಗೆ ಅವಕಾಶ ಸಿಕ್ಕಿಲ್ಲ. ಜೈಲಿನೊಳಗೆ ಏನಾಗುತ್ತಿದೆ ಎಂಬ ಸತ್ಯವನ್ನು ಪಾಕ್ ಸರ್ಕಾರ ಮುಚ್ಚಿಡುತ್ತಿದೆ. ಒಂದು ವೇಳೆ ಇಮ್ರಾನ್ ಖಾನ್ ಹತ್ಯೆಯಾಗಿರುವುದು ದೃಢಪಟ್ಟರೆ, ಪಾಕಿಸ್ತಾನದಲ್ಲಿ ಭಾರೀ ದಂಗೆ ಏಳುವುದರಲ್ಲಿ ಸಂಶಯವಿಲ್ಲ. ಸದ್ಯಕ್ಕೆ ಈ ಸುದ್ದಿ ವದಂತಿಯಾಗಿ ಉಳಿದಿದ್ದರೂ, ಕುಟುಂಬಸ್ಥರಿಗೆ ಪ್ರವೇಶ ನಿರಾಕರಿಸುತ್ತಿರುವುದು ಜನರ ಅನುಮಾನಕ್ಕೆ ತುಪ್ಪ ಸುರಿಯುವಂತೆ ಮಾಡಿದೆ.

Previous articleಶ್ರೀರಾಮ, ಲಕ್ಷ್ಮಣ, ರಾವಣ ಕ್ರೂರಿಗಳು; ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ವಿರುದ್ಧ ಎಫ್‌ಐಆರ್ ದಾಖಲು
Next articleCME ಸೋಲಾರ್ ಬಿಗ್ ಡೀಲ್: ಸೌರಶಕ್ತಿ ವಲಯದಲ್ಲಿ ಹೊಸ ಮೈಲಿಗಲ್ಲು!

LEAVE A REPLY

Please enter your comment!
Please enter your name here