ರೈಲು ನಿಲ್ದಾಣಗಳಲ್ಲಿ ವೈದ್ಯಕೀಯ ತುರ್ತುಸೇವೆಗೆ ನೆಟ್ಟಿಗರ ಬಹುಪರಾಕ್‌

0
63

ಪಾಲಕ್ಕಾಡ್ (ಕೇರಳ): ಕನ್ಯಾಕುಮಾರಿ-ದಿಬ್ರುಗಢ ವಿವೇಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಅಕಸ್ಮಾತ್ ದವಡೆ ಜಾರಿದ ಘಟನೆ ಪಾಲಕ್ಕಾಡ್ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಘಟನೆಯ ಬಳಿಕ ರೈಲು ಸಿಬ್ಬಂದಿಗಳು ತಕ್ಷಣ ಮಾಹಿತಿ ನೀಡಿದ್ದು, ರೈಲ್ವೆ ವೈದ್ಯರು ಸ್ಥಳಕ್ಕಾಗಮಿಸಿ ಪ್ರಯಾಣಿಕನಿಗೆ ತುರ್ತು ಚಿಕಿತ್ಸೆ ನೀಡಿದರು. ಪಾಲಕ್ಕಾಡ್ ರೈಲ್ವೆ ಆಸ್ಪತ್ರೆಯ ವಿಭಾಗೀಯ ವೈದ್ಯಾಧಿಕಾರಿ (DMO) ಡಾ. ಜಿತಿನ್ ಪಿ.ಎಸ್. ಅವರು ನಿಲ್ದಾಣಕ್ಕೆ ತಲುಪಿದ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕನಿಗೆ ಸೂಕ್ತ ಚಿಕಿತ್ಸೆ ನೀಡಿದರು.

ದವಡೆಯ ಮೂಳೆ ಜಾರಿಕೆಯಿಂದ ತೀವ್ರ ನೋವು ಅನುಭವಿಸುತ್ತಿದ್ದ ಪ್ರಯಾಣಿಕನ ಸ್ಥಿತಿ ಇದೀಗ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ರೈಲು ನಿಲ್ದಾಣಗಳಲ್ಲಿ ವೈದ್ಯಕೀಯ ತುರ್ತುಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಈ ಘಟನೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ವೈದ್ಯಕೀಯ ತುರ್ತುಸೇವೆಗಳು ಹಾಗೂ ತರಬೇತಿ ಪಡೆದ ಸಿಬ್ಬಂದಿ ಇರುವುದರ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ರೈಲು ಪ್ರಯಾಣದ ವೇಳೆ ಅಸಾಧಾರಣ ಆರೋಗ್ಯ ಸಮಸ್ಯೆ ಎದುರಾದಾಗ ತ್ವರಿತ ಪ್ರತಿಕ್ರಿಯೆ ನೀಡುವ ವ್ಯವಸ್ಥೆಯು ಹೇಗೆ ಜೀವ ಉಳಿಸಬಲ್ಲದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

Previous articleಸೇವಾ ನಿಯಮ ಉಲ್ಲಂಘನೆಗೆ ಬೆಂಬಲ ನೀಡುವವರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
Next articleನಮ್ಮ ಮೆಟ್ರೋಗೆ 14ರ ಸಂಭ್ರಮ

LEAVE A REPLY

Please enter your comment!
Please enter your name here