7,52,260 ಮೌಲ್ಯದ
ಅಕ್ರಮ ಸಾರಾಯಿ ಸಹಿತ ಒಬ್ಬನ ಬಂಧನ

0
18

ಬೆಳಗಾವಿ : ಅಕ್ರಮವಾಗಿ ಗೋವಾದಿಂದ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳಗಾವಿಯ ಉದ್ಯಮಭಾಗ ಪೊಲೀಸರು ಬಂಧಿಸಿ, ಆತನಿಂದ 7.52,260 ರೂ. ಮೌಲ್ಯದ ಮದ್ಯ ಹಾಗೂ ಸಾರಾಯಿ ಸಾಗಾಟಕ್ಕೆ ಉಪಯೋಗಿಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಗುರುವಾರ ಮಜಗಾವಿಯ 5ನೇ ರೇಲ್ವೆ ಗೇಟ್ ಹತ್ತಿರ ಖಡೇಬಜಾರ್ ಎಸಿಪಿ ಅರುಣಕುಮಾರ ಕೋಲೂರು ಇವರ ಮಾರ್ಗದರ್ಶನದಲ್ಲಿ ಉದ್ಯಮಬಾಗ ಠಾಣೆ ಪೊಲೀಸ್ ಇನ್ಸಪೆಕ್ಟರ್ ಆರ್.ಎಸ್ ಬಿರಾದಾರ ಮತ್ತು ಸಿಬ್ಬಂದಿಗಳಾದ ಪಿಎಸ್ ಐ ಶ್ರೀಮತಿ ಜಿ.ಎನ್.ಗುರ್ಲಹೊಸೂರ ಮತ್ತು ಟಿ.ಬಿ ಕುಂಚನೂರ, ಶ್ರೀಮತಿ ಎ.ಎಮ್.ಕಾಂಬಳೆ, ಭರಮಾ ಕರೆಗಾರ, ಸಿ.ಎಸ್.ಹಂಚಿನಾಳ, ಆನಂದ ಬಿದನೂರ, ಐ.ಎಮ್ ಚವಲಗಿ, ಎಸ್.ಎ.ಕರ್ಕಿ ಇವರ ತಂಡ ದಾಳಿ ನಡೆಸಿ ವಾಹನದಿಂದ 7.52,260 ರೂಪಾಯಿ ಮೌಲ್ಯದ ಮದ್ಯ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಪರಸರಾಮ ಬಾಹುರಾವ ಪೆಟ್ಟೇಕರ (೩೧) ಸಾ.ಹೊಸೂರ ಬಸವನಗಲ್ಲಿ ಖಾಸಭಾಗ ಶಹಾಪೂರ ಈತನಿಗೆ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರೆಸಲಾಗಿದೆ.
ಈ ದಾಳಿಯಲ್ಲಿ ಭಾಗಿಯಾದ ಉದ್ಯಮಬಾಗ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯಾ ಹಾಗೂ ಪೊಲೀಸ್ ಉಪ ಆಯುಕ್ತರಾದ ಶೇಖರ್, ಸ್ನೇಹಾ ಪಿವ್ಹಿಯವರು ಶ್ಲಾಘಿಸಿದ್ದಾರೆ.

Previous articleಬೆಲ್ಲದ ಬದಲು ನನಗೆ ಟಿಕೆಟ್‌ ಕೊಡಿ ಎಂದ ಮೇಯರ್‌
Next articleಯಾವುದೇ ಕ್ಷಣದಲ್ಲಿ ಕರ್ನಾಟಕ ಚುನಾವಣೆ ಘೋಷಣೆ