ಸ್ವಾಮೀಜಿಗೆ ಬ್ಲಾಕ್‌ಮೇಲ್: ೧ ಕೋಟಿ ರೂ. ಪಂಗನಾಮ..!

0
14

ಬಾಗಲಕೋಟೆ: ಎಡಿಜಿಪಿ ಹೆಸರಿನಲ್ಲಿ ಸ್ವಾಮೀಜಿಯೊಬ್ಬರಿಗೆ ಬ್ಲಾಕ್‌ಮೇಲ್ ಮಾಡಿ ೧ ಕೋಟಿ ರೂ.ಗಳನ್ನು ವಸೂಲಿ ಮಾಡಿದ ಘಟನೆ ನಡೆದಿದೆ.
ನಗರದ ಹೊರವಲಯದ ಶ್ರೀಪರಮಹಂಸ ಪರಮಾರೂಢ ಸ್ವಾಮೀಜಿ(೬೩) ವಂಚನೆಗೆ ಒಳಗಾದವರು. ಪ್ರಕರಣ ಸಂಬಂಧ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವ ಪ್ರಕಾಶ ಮುಧೋಳ ಸೇರಿ ಇತರ ಓರ್ವನ ಮೇಲೆ ಪ್ರಕರಣ ದಾಖಲಾಗಿದೆ.ತಾನು ಡಿಎಸ್‌ಪಿ ಸತೀಶ್ ಎಂದು ಸ್ವಾಮೀಜಿಗೆ ಫೋನ್ ಮಾಡಿರುವ ಪ್ರಕಾಶ ನಿಮ್ಮ ಬಗ್ಗೆ ಗೃಹ ಸಚಿವರ ಕಚೇರಿಗೆ ಸಾಕಷ್ಟು ದೂರುಗಳು ಬಂದಿವೆ. ನಿನ್ನ ಮಾನ ಹರಾಜು ಹಾಕುತ್ತೇವೆ ನಮ್ಮ ಎಡಿಜಿಪಿ ಅವರಿಗೆ ಹಣ ಕೊಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ಮುಂದೆ ಮತ್ತೋರ್ವ ಆರೋಪಿ ಎಡಿಜಿಪಿ ಹೆಸರಿನಲ್ಲಿ ಸ್ವಾಮೀಜಿಗೆ ಬೆದರಿಕೆ ಹಾಕಿದ್ದು, ಭಯಗೊಂಡ ಸ್ವಾಮೀಜಿ ಮೊದಲು ೬೧ ಲಕ್ಷ ರೂ. ಹಾಗೂ ನಂತರದಲ್ಲಿ ೩೯ ಲಕ್ಷ ರೂ. ಸೇರಿಸಿ ಒಟ್ಟು ಒಂದು ಕೋಟಿ ರೂ.ಗಳನ್ನು ಕೊಟ್ಟಿದ್ದಾರೆ. ನಂತರವೂ ಆರೋಪಿಗಳು ಹಣಕ್ಕಾಗಿ ಪೀಡಿಸಿದಾಗ ಪೊಲೀಸರ ಮೊರೆ ಹೋಗಿದ್ದಾರೆ. ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬೆಂಗಳೂರು ಪ್ರತಿಷ್ಠಿತ ​ಹೋಟೆಲ್​ಗೆ ಬಾಂಬ್ ಬೆದರಿಕೆ
Next articleರಸ್ತೆ ಮಧ್ಯೆ ಹೊತ್ತಿ ಉರಿದ BMW ಕಾರು