ಶಿವಮೊಗ್ಗ: ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಕಲಿ ಆದೇಶ ಕಾಪಿ ನೀಡಿ ಶಿವಮೊಗ್ಗದ ಯುವಕನೊಬ್ಬನಿಗೆ ೨.೧೦ ಲಕ್ಷ ರೂ. ವಂಚಿಸಲಾಗಿದೆ.
ಯುವಕನ ಸ್ನೇಹಿತನೊಬ್ಬನ ಕಡೆಯಿಂದ ಹೈದರಾಬಾದ್‌ನ ಮಹೇಶ್ ಎಂಬಾತನ ಪರಿಚಯವಾಗಿತ್ತು. ಆತ ಯುವಕನಿಗೆ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಹಂತ ಹಂತವಾಗಿ ಹಣ ಪಡೆದು ೨೦೨೩ರ ಡಿಸೆಂಬರ್‌ನಲ್ಲಿ ಸಾಫ್ಟವೇರ್ ಕಂಪನಿಯೊಂದರಲ್ಲಿ ನೇಮಕಾತಿ ಪತ್ರ ಕಳುಹಿಸಿದ್ದ. ಪರಿಶೀಲಿಸಿದಾಗ ಆ ನೇಮಕಾತಿ ಆದೇಶ ನಕಲಿ ಎಂಬುದು ಯುವಕನಿಗೆ ಗೊತ್ತಾಗಿತ್ತು. ಈ ಹಿನ್ನೆಲೆ ಮಹೇಶ್‌ಗೆ ಕರೆ ಮಾಡಿ ಹಣ ಹಿಂತಿರುಗಿಸುವಂತೆ ತಿಳಿಸಿದ್ದ. ಆದರೆ ಈವರೆಗೂ ಆತ ಹಣ ಹಿಂತಿರುಗಿಸದ ಹಿನ್ನೆಲೆ ಯುವಕ ದೂರು ನೀಡಿದ್ದಾನೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.