ಬೆಂಗಳೂರು: ಸರ್ಕಾರ ಬಿದ್ದರೆ ಪರವಾಗಿಲ್ಲ, ರಾಜ್ಯದಲ್ಲಿ ಜಾತಿಗಣತಿ ಜಾರಿ ಮಾಡಲೇಬೇಕು ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಜಾತಿಗಣತಿ ಜಾರಿ ವಿಚಾರ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಇದೆ. ಆದರೆ ಜಾತಿಗಣತಿ ಜಾರಿಗೆ ಸರ್ಕಾರ ಮೀನಾಮೇಷ ಎಣಿಸದೆ ಮೊದಲು ಜಾರಿ ಮಾಡಲಿ ಎಂದು ಆಗ್ರಹಿಸಿದರು. ಜಾತಿಗಣತಿ ಜಾರಿಯಿಂದಾಗಿ ಎಲ್ಲ ಸಮುದಾಯಗಳಿಗೆ ಅನುಕೂಲವಾಗಲಿದೆ. ಜಾತಿಗಣತಿ ಜಾರಿಯಿಂದಲೇ ಸರ್ಕಾರ ಉರುಳುವುದು ಎಂದಾದರೆ ಹಾಗೆಯೇ ಆಗಲಿ ಎಂದಿದ್ದಾರೆ.






















