ವಿಪ ಸದಸ್ಯ ಬಿ.ಎಂ. ಫಾರೂಕ್ ಸಹೋದರ ಮುಮ್ತಾಝ್ ಆಲಿ‌ ನಾಪತ್ತೆ

0
21

ಮಂಗಳೂರು: ಖ್ಯಾತ ಉದ್ಯಮಿ, ಮಾಜಿ ಶಾಸಕ ಮೊಯ್ದಿನ್ ಬಾವ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರ ಸಹೋದರ ಮುಮ್ತಾಝ್ ಆಲಿ‌ ಕಳೆದ ರಾತ್ರಿಯಿಂದ ನಾಪತ್ತೆಯಾಗಿದ್ದು, ಅವರ ಬಿಎಂ ಡಬ್ಲ್ಯು ಕಾರು ಕುಳೂರು ಸೇತುವೆಯಲ್ಲಿ ಅಪಘಾತಗೊಂಡ ಸ್ಥಿತಿಯಲ್ಲಿ‌ ಪತ್ತೆಯಾಗಿದೆ.
ಮುಮ್ತಾಝ್ ಆಲಿ‌ ಅವರ‌ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಗ್ನಿಶಾಮಕ ದಳದವರು ಕುಳೂರು ನದಿಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಸ್ಥಳದಲ್ಲಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ.
ಉದ್ಯಮಿ‌ ಮುಮ್ತಾಝ್ ಆಲಿ ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

Previous articleಪೊಲಿಟಿಕಲ್ ಬಿಗ್‌ಬಾಸ್…
Next articleದತ್ತಾತ್ರೇಯ‌ಸ್ವಾಮಿ‌ ಮೂರ್ತಿ ಭಗ್ನ : ಸಾರ್ವಜನಿಕರ ಆಕ್ರೋಶ