ವಿದ್ಯುತ್ ತಂತಿ ಹರಿದು 9 ಕುರಿ ಸಾವು

0
43

ವಿಜಯಪುರ : ಬಬಲೇಶ್ವರ ತಾಲೂಕಿನ ಉಪ್ಪಳದಿನ್ನಿ ಗ್ರಾಮದ ಬಳಿ ಹೈ ಟೆನ್ಶನ್ ವಿದ್ಯುತ್ ತಂತಿ ಹರಿದು 9 ಕ್ಕೂ ಹೆಚ್ಚು ಕುರಿಗಳ ಸಾವು.

ಬುಧವಾರ ಸಂಜೆ 5 ಗಂಟೆಗೆ ಸುಮಾರಿಗೆ ಜಮಖಂಡಿ ತಾಲೂಕಿನ ಹೂನ್ನೂರ ಗ್ರಾಮದ ಕುರಿಗಾಹಿ ದಶರಥ ಮಾರುತಿ ಸಸಲಾದಿ ಎಂಬುವವರಿಗೆ ಸೇರಿದ್ದ ಕುರಿಗಳು. ಮಳೆ ಜೋರಾಗಿದ್ದರಿಂದ ಕಾಲುವೆ ರಸ್ತೆ ಮೇಲೆ ಸುಮಾರು 600 ಕ್ಕೂ ಹೆಚ್ಚು ಕುರಿಗಳನ್ನು ಹೊಡೆದುಕೊಂಡು ಕುರಿಗಾಹೀಗಳು ಹೊರಟಿದ್ದರು.

ಏಕಾಏಕಿ ವಿದ್ಯುತ್ ತಂತಿ ಹರಿದು ಕುರಿಗಳ ಮೇಲೆ ಬಿದ್ದಿದ್ದು ಕುರಿಗಳು ಸಾವನಪ್ಪಿವೆ. ಹಳೆಯದಾಗಿದ್ದ ತಂತಿಯನ್ನು ಬದಲಾಯಿಸಲು ನಿರ್ಲಕ್ಷ ವಹಿಸಿದ್ದ ಕೆಇಬಿ ಅಧಿಕಾರಿಗಳ ಕಾರ್ಯ ವೈಖರಿಗೆ 9 ಕುರಿಗಳು ಸಾವನಪ್ಪಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ.

ತಪ್ಪಿದ ಬಾರಿ ಅನಾಹುತ: ತಂತಿ ಕೆಳಗೆ 600 ಕುರಿಗಳು ನಾಲ್ಕೈದು ಜನ ಕುರಿಗಾಹಿಗಳು ಹೊರಟಿದ್ದರು. ಕುರಿಗಳು ತಂತಿ ಕೆಳಗಿಂದ ಪಾಸ್ ಆಗಿದ್ದವು ಇನ್ನೇನು ಕೆಲವು ಮಾತ್ರ ಕುರಿಗಳು ಉಳಿದುಕೊಂಡಿದ್ದವು ಅಷ್ಟರಲ್ಲೇ ತಂತಿ ಕಟ್ ಆಗಿ ಬಿದ್ದಿದೆ. ಅದೃಷ್ಟವಶಾತ್ ಕುರಿಗಾಹಿಗಳು ದೂರ ಇದ್ದುದ್ದರಿಂದ ಬಾರಿ ಅನಾಹುತ ತಪ್ಪಿದೆ.

Previous articleಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ
Next articleರೆಡ್ಡಿ ಪ್ರಕರಣ `ನಲ್ ಆ್ಯಂಡ್ ವಾಯ್ಡ್’ ಆಗಲಿದೆ