ವಿಜಯಪುರಕ್ಕೆ ಶಾಶ್ವತ ಕುಡಿಯುವ ನೀರು

0
24

ವಿಜಯಪುರ: ಯಾವುದೇ ವ್ಯತ್ಯಯವಿಲ್ಲದೇ ವಿಜಯಪುರ ನಗರಕ್ಕೆ ನಿರಂತರ ನೀರು ಪೂರೈಕೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ದಿ ಸಚಿವರಾದ ಎಂ.ಬಿ.ಪಾಟೀಲ್‌ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹೊನಗನಹಳ್ಳಿ – ವಿಜಯಪುರ ಮಧ್ಯದ ಕೊನೆಯ 11 ಕಿ.ಮೀ. ಭಾಗದಲ್ಲಿ ಪಿ.ಎಸ್.ಸಿ ಕೊಳವೆ ಪೈಪ್ ಪದೇ ಪದೇ ಒಡೆಯುತ್ತಿದ್ದು, ನೀರು ಸರಬರಾಜಿನಲ್ಲಿ ಗಂಭೀರ ವ್ಯತ್ಯಯ ಉಂಟಾಗುತ್ತಿರುವುದಕ್ಕೆ ಪರಿಹಾರ ಒದಗಿಸಲಾಗುತ್ತಿದೆ.

ಹೊನಗನಹಳ್ಳಿ – ವಿಜಯಪುರ ಮಧ್ಯೆ ಎಂ.ಎಸ್. ಪೈಪ್ ಅಳವಡಿಕೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. 50 ಕೋಟಿ ರೂ. ವೆಚ್ಚದಲ್ಲಿ ಈ ಭಾಗದ ಪೈಪ್ ಲೈನ್ ಪುನರ್ ನಿರ್ಮಾಣ ಮಾಡಲಾಗುತ್ತದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದ್ದು, ವಿಜಯಪುರ ಮಹಾನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದಿದ್ದಾರೆ.

Previous articleದನಸಾಗಾಟ ಅಕ್ರಮವೆಂದು ಸಂಶಯಿಸಿ ಹಲ್ಲೆ: ಇಬ್ಬರ ಬಂಧನ!
Next articleಸೆಟ್ ಆಗೋಲ್ಲ… ಅಂದ KD ಬಿಡುಗಡೆ