ಲೂಟಿ ಹೊಡೆದವರಾದರೂ ಯಾರು ಸ್ವಾಮಿ?

0
9

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ನಡೆದಿರುವುದು ನಿಜವಾದರೆ, ಲೂಟಿ ಹೊಡೆದವರಾದರೂ ಯಾರು ಸ್ವಾಮಿ? ಎಂದು ವಿಪಕ್ಷ ನಾಯಕ ಆರ್ ಅಶೋಕ ಪ್ರಶ್ನಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನಾನವನಲ್ಲ… ನಾನವನಲ್ಲ… ನಾನವನಲ್ಲ…. ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಗರಣ ನಡೆದಿರುವುದು ನಿಜವಂತೆ.

❌ಆದರೆ ಸಚಿವ ಸಂಪುಟದ ಮುಖ್ಯಸ್ಥರಾದ ಮುಖ್ಯಮಂತ್ರಿಗಳು ಜವಾಬ್ದಾರರಲ್ಲವಂತೆ

❌ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಜವಾಬ್ದಾರರಲ್ಲವಂತೆ

❌ ಸಚಿವರಾಗಿದ್ದ ನಾಗೇಂದ್ರ ಜವಾಬ್ದಾರರಲ್ಲವಂತೆ

❌ನಿಗಮದ ಅಧ್ಯಕರೂ ಆದ ಕಾಂಗ್ರೆಸ್ ಶಾಸಕ ಬಸವರಾಜ ದದ್ದಲ್ ಜವಾಬ್ದಾರರಲ್ಲವಂತೆ

❌ ತನಿಖೆಯಲ್ಲಿ ಸತ್ಯ ಹೊರಹಾಕುತ್ತಿರುವ ಅಧಿಕಾರಿಗಳಿಗೆ ಇಡಿ ಒತ್ತಡವಿದೆಯಂತೆ

ಇನ್ನು ನಿಮ್ಮ ಪ್ರಕಾರ ಲೂಟಿ ಹೊಡೆದವರಾದರೂ ಯಾರು ಸ್ವಾಮಿ?

ಪರಿಶಿಷ್ಟ ಸಮುದಾಯಗಳ ಹಣ ಲೂಟಿ ಹೊಡೆದು, ಒಬ್ಬ ಪ್ರಾಮಾಣಿಕ ಅಧಿಕಾರಿಯ ಆತ್ಮಹತ್ಯೆಗೆ ಕಾರಣವಾಗಿರುವ ಕರ್ನಾಟಕ ಕಾಂಗ್ರೆಸ್‌ ಸಚಿವರಿಗೆ, ಶಾಸಕರಿಗೆ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ. ಕರ್ನಾಟಕದ ಇತಿಹಾಸದಲ್ಲಿ ಮಾತ್ರವಲ್ಲ, ಇಡೀ ದೇಶದ ಇತಿಹಾಸದಲ್ಲಿ ಇಂತಹ ಲಜ್ಜೆಗೆಟ್ಟ ಪಕ್ಷ, ಮಾನಗೆಟ್ಟ ಸರ್ಕಾರ ಮತ್ತೊಂದಿರಲಿಕ್ಕಿಲ್ಲ ಎಂದಿದ್ದಾರೆ.

Previous articleಇ.ಡಿ ಆಧಿಕಾರಿಗಳ ವರ್ತನೆ ವಿರೋಧಿಸಿ ಧರಣಿ
Next articleದೆಹಲಿ, ಜಾರ್ಖಂಡ್‌ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಅವರನ್ನೂ ಸಹ ಬಂಧಿಸಲು ಸಂಚು