ಬೆಳಗಾವಿ ಪಾಲಿಕೆ, ಅಧಿಕಾರಿಗೆ ಬೆದರಿಕೆ

0
34

ಬೆಳಗಾವಿ: ಕರ್ತವ್ಯನಿರತ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿ ಮೇಲೆ ಪಕ್ಷೇತರ ನಗರ ಸೇವಕರೊಬ್ಬರು ದರ್ಪ ಮೆರೆದ ಘಟನೆ ಬುಧವಾರ ನಡೆದಿದೆ.
ಅಶೋಕ ನಗರ ವಾರ್ಡ್‌ನ ನಗರಸೇವಕ ರಿಯಾಜ್ ಕಿಲ್ಲೆದಾರ ಕರ್ತವ್ಯನಿರತ ಕಂದಾಯ ಶಾಖೆ ಅಧಿಕಾರಿ ಆನಿಶೆಟ್ಟರ್ ಮೇಲೆ ದರ್ಪ, ಪುಂಡಾಟಿಕೆ ನಡೆಸಿದವರು ಎಂದು ಹೇಳಲಾಗಿದೆ.
ಇಲ್ಲಿ ನಗರಸೇವಕರು ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಪಿಐಡಿ ಮಾಡಿಕೊಡುವಂತೆ ಕಂದಾಯ ಶಾಖೆ ಅಧಿಕಾರಿಗೆ ಕಳೆದ ದಿನ ಸಂಜೆ ಹೇಳಿದ್ದರಂತೆ.! ಆಗ ಅವರು ನಾಳೆ ದಾಖಲೆ ಗಮನಿಸುವುದಾಗಿ ತಿಳಿಸಿದ್ದರು. ಆದರೆ ಕಂದಾಯ ಅಧಿಕಾರಿ ಆನಿಶೆಟ್ಟರ್ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಇ-ಖಾತಾದ ನೋಡಲ್ ಅಧಿಕಾರಿಯಾಗಿದ್ದರಿಂದ ಪಾಲಿಕೆ ಮುಖ್ಯ ಕಚೇರಿಯ ಅನೆಕ್ಸ್ ಕಟ್ಟಡಕ್ಕೆ ಬೆಳಿಗ್ಗೆಯೇ ಬಂದಿದ್ದರು.
ಈ ಸಂದರ್ಭದಲ್ಲಿ ನಗರಸೇವಕ ರಿಯಾಜ್ ಕಿಲ್ಲೆದಾರ ಅವರು ಅಧಿಕಾರಿಗೆ ಮತ್ತೆ ಕಾಲ್ ಮಾಡಿದ್ದರು. ಆಗ ಹತ್ತು ನಿಮಿಷ ಸಮಯ ಕೊಡಿ. ದಾಖಲೆ ಗಮನಿಸಿ ಹೇಳುವೆ ಅಂದಿದ್ದರು.
ಅಷ್ಟೇ ತಡ ನಗರಸೇವಕ ಕಿಲ್ಲೆದಾರ ಮೈಮೇಲೆ ದೆವ್ವ ಹೊಕ್ಕಂತೆ ಪಾಲಿಕೆ ಕಚೇರಿಗೆ ಆಗಮಿಸಿ ಕರ್ತವ್ಯ ನಿರತ ಅಧಿಕಾರಿ ಮೇಲೆ ಏರಿ ಹೋಗಿದ್ದಲ್ಲದೇ ಅವಾಚ್ಯ ಮಾತನಾಡಿ ಹಲ್ಲೆ ಯತ್ನ ಕೂಡ ಮಾಡಿದರು ಎಂದು ಗೊತ್ತಾಗಿದೆ.
ಅಲ್ಲಿ ವಾದವಿವಾದ ಗಮನಿಸಿದ ನಗರಸೇವಕ ದಿನೇಶ ನಾಶಿಪುಡಿ ಸೇರಿದಂತೆ ಮತ್ತಿತರರು ರಿಯಾಜ್ ಕಿಲ್ಲೆದಾರಗೆ ಬುದ್ಧಿ ಮಾತು ಹೇಳಿದರು. ನಂತರ ಉಪ ಆಯುಕ್ತ ಉದಯಕುಮಾರ ತಳವಾರ್ ಇಬ್ಬರನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದರು.
ಗಡಿನಾಡ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮರಾಠಿಯಲ್ಲಿ ದಾಖಲೆ ಕೊಡಿ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುವ ಕೆಲಸ ನಡೆಸಿದ್ದಾರೆ. ಅಂತಹುದರಲ್ಲಿ ಪಕ್ಷೇತರ ನಗರಸೇವಕ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಲ್ಲದೇ ಕೆಟ್ಟ ಶಬ್ದಗಳಿಂದ ನಿಂದಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Previous articleಜಗತ್ತನ್ನು ಇಸ್ಲಾಮೀಕರಣಗೊಳಿಸುವುದೇ `ಲವ್ ಜಿಹಾದ್’
Next articleಅಪ್ರಾಪ್ತೆ ಮೇಲೆ ಅಪ್ರಾಪ್ತರಿಂದ ಅತ್ಯಾಚಾರ