ಪಕೋಡಾ ಮಾಡುವುದೂ ಕೂಡ ಕಷ್ಟದ ಉದ್ಯೋಗವನ್ನಾಗಿಸಿದ ಕೇಂದ್ರ ಸರ್ಕಾರ!

0
10

ಬೆಂಗಳೂರು: ಪಕೋಡಾ ಮಾಡುವುದೂ ಕೂಡ ಕಷ್ಟದ ಉದ್ಯೋಗವನ್ನಾಗಿಸಿದೆ ಕೇಂದ್ರ ಸರ್ಕಾರ! ಎಂದು ರಾಜ್ಯ ಕಾಂಗ್ರೆಸ್‌ ಸಿಲಿಂಡರ್ ಬೆಲೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮತ್ತೊಮ್ಮೆ 25 ರೂಪಾಯಿಯಷ್ಟು ಏರಿಕೆ ಮಾಡಿದ ಕೇಂದ್ರ ಸರ್ಕಾರ ಬಡವರ ಮೇಲಿನ ಸರ್ಜಿಕಲ್ ಸ್ಟ್ರೈಕ್ ಮುಂದುವರೆಸಿದೆ!
ಕೆಲವೇ ದಿನಗಳಲ್ಲಿ ಸಿಲಿಂಡರ್ ಬೆಲೆಯನ್ನು 2000 ರೂಪಾಯಿಗಳಿಗೆ ತಲುಪಿಸುವ ಗುರಿಯೇ ? ಈಗ ಪಕೋಡಾ ಮಾಡುವುದೂ ಕೂಡ ಕಷ್ಟದ ಉದ್ಯೋಗವನ್ನಾಗಿಸಿದೆ ಕೇಂದ್ರ ಸರ್ಕಾರ! ಹೋಟೆಲ್ ಉದ್ಯಮ ಹಾಗೂ ಸಣ್ಣ ಉದ್ಯೋಗಸ್ಥರ ಬದುಕಿನ ಮೇಲೆ ಸವಾರಿ ಮಾಡುತ್ತಿದೆ ಮೋದಿ ಸರ್ಕಾರ ಎಂದು ಬರೆದುಕೊಂಡಿದೆ.

Previous articleಬೆಳಗಾವಿ‌ ನಗರಕ್ಕೆ ನುಗ್ಗಿದ ಕಾಡಾನೆ
Next articleಗೂಂಡಾಗಳ ಘಟಕಗಳನ್ನೂ ಅಸ್ತಿತ್ವಕ್ಕೆ ತರುವುದು ಬಾಕಿ