ನಾಯಿಗಳ ಕಾಟಕ್ಕೆ ಮುಕ್ತಿ ಎಂದು ?

0
17

ಕೋಲಾರ: ಸರ್ಕಾರಿ ಆಸ್ಪತ್ರೆ ಎಂದರೆ ಏಕೆ ಸಾರ್ವಜನಿಕರು ಮೂಗು ಮುರಿಯುತ್ತಾರೆ ಎಂದರೆ ಇಲ್ಲಿದೆ ತಾಜಾ ಉದಾಹರಣೆ ನಗರದ ಎಸ್.ಎನ್.ಆರ್.
ಆಸ್ಪತ್ರೆಯ ಎಲ್ಲಾ ವಾರ್ಡ್ ಗಳಲ್ಲಿ ಬೀದಿ ನಾಯಿಗಳದೇ ದರ್ಬಾರ್.

ಆಸ್ಪತ್ರೆಯ ಸಿಬ್ಬಂದಿ ಕಣ್ಣಿದ್ದೂ ಕುರುಡರಂತೆ
ಆಸ್ಪತ್ರೆಯಲ್ಲಿ ಓಡಾಡುತ್ತಾ ಇರುತ್ತಾರೆ ಹೊರತು ನಾಯಿಗಳನ್ನು ಓಡಿಸುವ ಅಥವ ಅವು ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರುವುದಿಲ್ಲ.

ಡಿ ನೌಕರರ ಮೇಲೆ ಹಿಡಿತ ಇಲ್ಲದ ಡಿ.ಹೆಚ್.ಓ ಪ್ರತಿದಿನ ಆಸ್ಪತ್ರೆಯ ರೌಂಡ್ಸ್ ಮಾಡುತ್ತಾರೋ ಇಲ್ಲವೋ ದೇವರಿಗೇ ಗೊತ್ತು,ಬೀದಿನಾಯಿಗಳು ಒಂದು ವೇಳೆ ಮಕ್ಕಳನ್ನು,ಸಾರ್ವಜನಿಕರನ್ನು, ವೃದ್ಧರನ್ನು ಕಚ್ವಿದರೆ ಜವಾಬ್ದಾರಿ ಯಾರು !.

ಯಾವುದೇ ಅಹಿತಕರ ಘಟನೆಗಳು ನಡೆಯುವ ಮುನ್ನ,ರೋಗಿಗಳು, ಸಾರ್ವಜನಿಕರು, ಮುಕ್ತವಾಗಿ ಭಯ ಇಲ್ಲದೆ ಆಸ್ಪತ್ರೆಯಲ್ಲಿ ಓಡಾಡಲು ಬೆಳ್ಳಿಗ್ಗೆ ರಾತ್ರಿ ಎನ್ನದೇ ತಮ್ಮದೇ ವಾಸಸ್ಥಳ ಎಂಬಂತೆ ರಾಜಾರೋಷವಾಗಿ ಓಡಾಡುವ ಇಂತಹ ಬೀದಿ ನಾಯಿಗಳಿಗೆ ಕಡಿವಾಣ ಹಾಕುವ ಕೆಲಸ ಆಸ್ಪತ್ರೆಯ ಸಿಬ್ಬಂದಿ ಮಾಡುತ್ತಾರೆಯೇ,ಡಿ.ಎಚ್.ಓ.ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.

Previous articleಡಬ್ಲ್ಯೂಟಿಸಿ ಫೈನಲ್‌ಗೆ ದಕ್ಷಿಣ ಆಫ್ರಿಕಾ ಲಗ್ಗೆ
Next articleನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು