‘ನಾನು ಯಾವುದೇ ಸರ್ಕಾರದ ಹಿಂಬಾಲಕನಲ್ಲ’

0
11

ಶಿವಮೊಗ್ಗ: ‘ನನ್ನ ಜಿಲ್ಲೆಯವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸಾಮಾನ್ಯ ಷಡಾಕ್ಷರಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಗೆಲ್ಲಿಸಿದ್ದಾರೆ. ನಾನು ಯಾವುದೇ ಸರ್ಕಾರದ ಹಿಂಬಾಲಕನಲ್ಲ. ಸರ್ಕಾರಿ ನೌಕರರ ಸೇವಕನಾಗಿ ಕಾರ್ಯನಿರ್ವಹಿಸುವೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ಸಿ.ಎಸ್. ಷಡಾಕ್ಷರಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸಂಘ ಗೆದ್ದಿದೆ. ಮೊದಲ ಬಾರಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶೇ. ೯೦ರಷ್ಟು ಭರವಸೆಗಳನ್ನು ಈಡೇರಿಸಿ ನೌಕರರ ಕಣ್ಣೀರು ಒರೆಸಿದ್ದೇನೆ ಎಂದರು.
ಈ ಬಾರಿ ನೌಕರರಿಗೆ ಕೇಂದ್ರ ಮಾದರಿ ವೇತನ, ಎನ್‌ಪಿಎಸ್ ರದ್ದು, ಆರೋಗ್ಯ ಯೋಜನೆ ಜಾರಿ, ಹೈದರಾಬಾದ್-ಕರ್ನಾಟಕ ಭಾಗದ ನೌಕರರಿಗೆ ಮುಂಬಡ್ತಿಗಾಗಿ ೩೭೧ಜಿ ವಿಶೇಷ ಸ್ಥಾನಮಾನ, ಎಲ್ಲ ಎಲಾಖೆಗಳಲ್ಲಿರುವ ಎ'ಬಿ’ ಸಿ ಮತ್ತು ಡಿ ವೃಂದದ ನೌಕರರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಕಾಯ್ದೆ ತರುವುದೂ ಸೇರಿ ಹಲವು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುವೆ ಎಂದರು.
ಬೆಂಗಳೂರಿನಲ್ಲಿ ೨೫೦-೩೦೦ ಕೊಠಡಿಗಳುಳ್ಳ ಬೃಹತ್ ನೌಕರರ ಸಂಘದ ಕಟ್ಟಡ ನಿರ್ಮಾಣ ಮಾಡುವ ಉದ್ದೇಶವಿದೆ. ಒಂದು ಕೊಠಡಿಗೆ ೧೦೦ ರೂ. ನಿಗದಿ ಮಾಡುವ ಚಿಂತನೆ ಇದೆ. ೨ನೇ ಬಾರಿ ಅಧ್ಯಕ್ಷನಾಗಿದ್ದು ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಮಾದರಿ ಸಂಸ್ಥೆಯಾಗಿ ರೂಪಿಸುವೆ ಎಂದರು.

Previous articleಕಟ್ಕಿತೂಗಾಂವ್ ಗ್ರಾಮಕ್ಕೆ ಬಿವೈವಿ ನೇತೃತ್ವದ ಬಿಜೆಪಿ ಉನ್ನತ ಮಟ್ಟದ ನಿಯೋಗ ಭೇಟಿ
Next articleಸಂಸ್ಕೃತ ವಿದ್ವಾಂಸ ಪಿಯರೆ ಫಿಲಿಯೋಜಾ ನಿಧನ