ನದಿಗೆ ಉರುಳಿದ ಗ್ಯಾಸ್ ವಾಹನ

0
6

ಕೊಡೇಕಲ್ (ಯಾದಗಿರಿ ಜಿ.): ಎಚ್.ಪಿ. ಗ್ಯಾಸ್ ಸರಕು ವಾಹನವೊಂದು ಸಮೀಪದ ಡೋಣಿ ನದಿಗೆ ಉರುಳಿಬಿದ್ದು, ಸಿಲಿಂಡರ್ ಚೆಲ್ಲಾಪಿಲ್ಲಿಯಾಗಿವೆ.
ನಾರಾಯಣಪುರದಿಂದ ಕೊಡೇಕಲ್ ಸೇರಿದಂತೆ ಇತರೆಡೆ ಅಡುಗೆ ಅನಿಲ ವಿತರಿಸಲು ಹೊರಟಾಗ ಈ ವಾಹನವು ನದಿಗೆ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬುಧವಾರ ಬೆಳಗಿನ ಜಾವ ಚಾಲಕ ನಿದ್ದೆಗೆ ಜಾರಿದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದ್ದಾರೆ.

Previous articleಅಯೋಧ್ಯೆಯ ರಾಮನಿಗೆ ರಜತ ಪಲ್ಲಕ್ಕಿ, ಕಾಷ್ಠ ತೊಟ್ಟಿಲು ಅರ್ಪಣೆ
Next articleಗಂಡನನ್ನೇ ಕೊಲ್ಲುವ ಸ್ತ್ರೀಯರಿದ್ದಾರೆ..!