ಧರ್ಮಸ್ಥಳದ ಯುವತಿ ಪಂಜಾಬಿನಲ್ಲಿ ನಿಗೂಢ ಸಾವು

0
28

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಯುವತಿ ಪಂಜಾಬಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮೇ 17ರಂದು ನಡೆದಿದೆ.

ಮೃತ ಯುವತಿಯನ್ನು ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ,ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22) ಎಂದು ಗುರುತಿಸಲಾಗಿದೆ.
ಪಂಜಾಬಿನ ಎಲ್ ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಕಳೆದ ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು.

ಮುಂದೆ ಜಪಾನ್ ಗೆ ಉದ್ಯೋಗಕ್ಕೆ ಹೋಗುವವರಿದ್ದು ಪಂಜಾಬ್ ಎಲ್ ಪಿಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ತೆರಳಿದ್ದರು. ಸರ್ಟಿಫಿಕೇಟ್ ಪಡೆದ ಕೂಡಲೇ ಮನೆಯವರಲ್ಲಿ ಪೋನ್ ಮಾಡಿ ಮಾತನಾಡಿದ್ದರೆಂದು ತಿಳಿದು ಬಂದಿದೆ. ಇದಾದ ಬಳಿಕ ಈಕೆ‌ ನಿಗೂಢವಾಗಿ ಸಾವನ್ನಪ್ಪಿದ್ದು ,
ಪಂಜಾಬ್ ನ ಜಲಂದರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಟುಂಬದವರು ಪಂಜಾಬ್ ಗೆ ಪ್ರಯಾಣ ಬೆಳೆಸಿದ್ದಾರೆ. ಹೆಚ್ಚಿನ ಮಾಹಿತಿಗಳು ಕುಟುಂಬದವರು ಪಂಜಾಬ್ ತಲುಪಿದ ಬಳಿಕವಷ್ಟೆ ತಿಳಿದು ಬರಬೇಕಾಗಿದೆ.

Previous articleಬಂಟ್ವಾಳ ಚಾಕು ಇರಿತ ಪ್ರಕರಣ: ಹಲವರನ್ನು ವಶಕ್ಕೆ ಪಡೆದು ವಿಚಾರಣೆ
Next articleಇಡ್ಲಿ ತಿನ್ನಲು ಬಂದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ