ಜಾತಿ ಗಣತಿ ವಿಚಾರದಲ್ಲಿ ಕೇಂದ್ರ ಹಿಂದಿದೆ

0
35

ದಾವಣಗೆರೆ: ಜಾತಿ ಗಣತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಬಹಳ ಹಿಂದೆ ಇದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈಗಾಗಲೇ ಮಾಡಿ ಮುಗಿಸಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ, ಜನಗಣತಿ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದು ಸ್ವಾಗತಾರ್ಹ. ನಾವು ಜಾತಿ ಗಣತಿ ಮಾಡಿದಾಗ ಸ್ವಾರ್ಥಕ್ಕಾಗಿ, ಓಲೈಕೆಗಾಗಿ ಎಂದು ಬಿಜೆಪಿಯವರ ಹೇಳಿಕೆ ನೀಡುತ್ತಿದ್ದಾರೆ. ಕೇಂದ್ರದವರು ಈಗ ಜಾತಿ ಗಣತಿ ಮಾಡಲು ಹೊರಟಿದ್ದಾರಲ್ಲ, ಯಾವ ಸ್ವಾರ್ಥಕ್ಕಾಗಿ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯವನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು. ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟಾಗ ಯಾರೂ ಕೂಡ ವಿರೋಧ ಮಾಡ್ಲಿಲ್ಲ. ವರದಿಗೆ ವಿರುದ್ಧವಾದ ಅಭಿಪ್ರಾಯ ನೀಡ್ಲಿಲ್ಲ. ಯಾರಿಗೂ ಅನ್ಯಾಯವಾಗದಂತೆ ನೋಡಬೇಕು ಎಂದು ಹೇಳಿದ್ದರು. ಇದನ್ನೇ ವಿಪಕ್ಷದವರು ವರದಿ ಬಿಡುಗಡೆಗೆ ಸರ್ಕಾರ ಸಿದ್ಧವಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಲು ಜಾತಿಗಣತಿ ಮಾಡಿದ್ದು, ಆದರೆ ಸ್ವಾರ್ಥಕ್ಕಾಗಿ, ಓಟ್ ಬ್ಯಾಂಕ್‌ಗಾಗಿ ಜಾತಿಗಣತಿ ಮಾಡಿದ್ದಾರೆ ಎಂದರೆ ನಾನು ಒಪ್ಪೋದಿಲ್ಲ ಎಂದರು. ವರದಿ ಕಳೆದೋಗಿದೆ ಎಂದರೆ ಬಿಜೆಪಿಯವರು ಹೋಗಿ ಹುಡುಕಿಕೊಂಡ ಬರೋದಕ್ಕೆ ಹೇಳಿ. ಕಳೆದು ಹೋಗಿದೆ ಎಂದು ಸುಳ್ಳು ಹೇಳಿ ತಪ್ಪು ಸಂದೇಶ ನೀಡಿ ಗೊಂದಲಕ್ಕೆ ಒಳಪಡಿಸುವ ಕೆಲಸ ನಡೆಯುತ್ತಿದೆ. ಪಂಚಾಂಗ ಹೋಯ್ತು ಅಂದ್ರೆ ನಕ್ಷತ್ರ ಹೋಗಿ ಬಿಡುತ್ತಾ ಎನ್ನುವ ಇದೆ. ಅದೇ ರೀತಿ ವರದಿ ಹೋಗಿದೆ ಎಂದರೆ ವರದಿ ಪ್ರತಿಗಳು ಇರ್ತಾವೆ. ಈಗ ಜಾತಿಗಣತಿಯ ೮ ಸಂಪುಟಗಳನ್ನು ಕೂಡ ಸಚಿವರಿಗೆ ನೀಡಲಾಗಿದೆ. ಯಾವ ವರದಿ ಕೂಡ ಕಳೆದು ಹೋಗಿಲ್ಲ, ಎತ್ತಿ ಇಟ್ಟಿಲ್ಲ ಎಲ್ಲಾವು ಇವೆ ಎಂದು ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.

ಸಿಎಂ ಸ್ಥಿಮಿತತೆ ಕಳ್ಕೊಂಡಿದ್ದಾರೆ ಎಂದವರಿಗೆ ಸ್ಥಿಮಿತತೆ ಸರಿಯಿಲ್ಲ: ಸಿದ್ದರಾಮಯ್ಯನವರು ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದವರ ಸ್ಥಿಮಿತತೆ ಸರಿ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು. ಕಾಂಗ್ರೆಸ್ ಶಾಲು ಹಾಕಿಕೊಂಡು ನಮ್ಮ
ಕಾರ್ಯಕ್ರಮದಲ್ಲಿ ಕೂತ್ಕೊಂಡು ಧಿಕ್ಕಾರ ಕೂಗಿದರೆ ಅವರನ್ನು ಹೇಡಿಗಳು ಎನ್ನಬೇಕೇ ಹೇಳಿ. ಪೊಲೀಸ್ ಅಧಿಕಾರಿ ಮೇಲೆ ಸಿದ್ದರಾಮಯ್ಯ ಅವರು ಕೈ ಎತ್ತಿಲ್ಲ. ಏಕವಚನದಲ್ಲಿ ಅವರು ಯಾರನ್ನು ಕರೆದಿಲ್ಲ. ಪ್ರೀತಿಯಿಂದ ಕರೆದು ಕೈ ಎತ್ತಿದ್ದಾರೆ. ಏಕವಚನದಲ್ಲಿ ಕರೆದಿದ್ದಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಅವರ ಮಾತಿನ ಸ್ವಭಾವ ಹಾಗೇ ಇದೆ. ಅವರನ್ನು ಶ್ರೀಮಂತ ಹೃದಯ, ಬಡವರಿಗೆ ಸ್ಪಂದಿಸುವ ಹೃದಯ ಸಿದ್ದರಾಮಯ್ಯನವರದ್ದು. ವಿರೋಧ ಪಕ್ಷಗಳಿಗೆ ಕೆಲವು ಚುನಾವಣೆಯಲ್ಲಿ ಸೋತಿದ್ದರಿಂದ ಈ ರೀತಿ ಮಾಡುತ್ತಿದ್ದಾರೆ. ಜನರ
ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು
.
ಪ್ರಧಾನಿಗಳು ಕಾಣೆಯಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ ಎಂಬ ಪ್ರಶ್ನೆಗೆ, ಪ್ರಧಾನಿಗಳು ಇಲ್ಲೇ ಇದ್ದಾರಲ್ಲ, ಅವರು ಎಲ್ಲಿಗೆ ಹೋಗಿದ್ದಾರೆ. ವಾಕ್ ಸ್ವಾತಂತ್ರ‍್ಯ ಇರೋದರಿಂದ ಅವರ ಭಾವನೆ ವ್ಯಕ್ತಪಡಿಸುತ್ತಾರೆ ಎಂದರು. ಪೆಹಲ್ಗಾಮ್ ದಾಳಿಗೆ ಪ್ರತಿಕಾರದ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎನ್.ರಾಜಣ್ಣ, ಯಾರು ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಲೇಬೇಕು ಎನ್ನುವುದು ದೇಶದ ಜನರ ಭಾವನೆ. ನಾನು ಕೂಡ ದೇಶದ ಪ್ರಜೆಗಳಲ್ಲಿ ಒಬ್ಬ. ನನ್ನ ಭಾವನೆ ಕೂಡ ಅದೇ ಆಗಿದೆ ಎಂದು ತಿಳಿಸಿದರು.

Previous articleಪೊಲೀಸ್ ಇಲಾಖೆ ಆಡಳಿತ ಪಕ್ಷದ ಏಜೆಂಟ್ ರೀತಿ ವರ್ತಿಸಬಾರದು
Next articleನಾಳೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ