ಗಮನ ಬೇರೆಡೆ ಸೆಳೆದು ಚಿನ್ನಾಭರಣ ನಗದು ಕಳವು

0
101

ಬಳ್ಳಾರಿ: ನಗರದ ತೇರು ಬೀದಿಯಲ್ಲಿ ವ್ಯಕ್ತಿಯ ಗಮನ ಬೇರೆಡೆ ಸೆಳೆದು ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗ್ಗೆ 4.45ರ ಸುಮಾರಿನಲ್ಲಿ ವೆಂಕಟರಾಗ್‌ ಅವಾಲು ಎಂಬುವವರು ದ್ವಿಚಕ್ರ ವಾಹನದಲ್ಲಿ ನಗರದ ತೇರು ಬೀದಿಯ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ, ಕೆಳಗೆ ಯಾವು ವಸ್ತುವೊಂದು ಬಿದ್ದಿದೆ ಎಂದು ಹೇಳಿ, ಹಿಂದೆ ತಿರುಗಿ ನೋಡಿದಾಗ ಯಾವುದೇ ವಸ್ತು ಬಿದ್ದಿರಲಿಲ್ಲ. ಅಷ್ಟರೊಳಗಾಗಲೇ ತನ್ನ ಬಳಿ ಇದ್ದ 22‌. 99 ಲಕ್ಷ ರೂ. ಹಣ ಮತ್ತು 15.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ‌ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಬ್ರೂಸ್ ಪೇಟೆ ಠಾಣೆಯಲ್ಲಿ ಈ ಕುರಿತು ದಾಖಲಿಸಲಾಗಿದೆ.

Previous articleಭಾವನಾತ್ಮಕ ಪರಿಸರ ಮಾಲಿನ್ಯ….
Next articleಸೆಪ್ಟೆಂಬರ್ 16 ರಿಂದ RE-INVEST 2024