ಕೆಪಿಎಸ್‌ಸಿ ಮತ್ತೆ ಎಡವಟ್ಟು: ತಾಳೆಗೆ ಸಿಗದ ಹಾಲ್ ಟಿಕೆಟ್-ಒಎಂಆರ್

0
25

ಕೋಲಾರ: ಕೆಪಿಎಸ್‌ಸಿಯು ಭಾನುವಾರ ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಲೋಪ ಕಂಡುಬಂದಿದೆ. ಕೋಲಾರದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಸ್ಥೆ ವಿರುದ್ಧ ಪರೀಕ್ಷಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜು ಪರೀಕ್ಷಾ ಕೇಂದ್ರ, ಮಹಿಳಾ ಕಾಲೇಜು ಪರೀಕ್ಷಾ ಕೇಂದ್ರ ಸೇರಿದಂತೆ ವಿವಿಧೆಡೆ ದೂರುಗಳು ಕೇಳಿಬಂದಿದೆ. ಕೆಪಿಎಸ್‌ಸಿಯಿಂದ ನೀಡಲಾಗಿದ್ದ ಪ್ರವೇಶ ಪತ್ರದ ಸಂಖ್ಯೆಗೂ ಹಾಗೂ ಓಎಂಆರ್ ನಂಬರಿಗೂ ತಾಳೆಯಾಗದೇ, ಗೊಂದಲ ಸೃಷ್ಟಿಯಾಗಿತ್ತು. ಅಲ್ಲದೇ 10 ಗಂಟೆಗೆ ಆರಂಭವಾಗಬೇಕಾದ ಪರೀಕ್ಷೆ 1ಗಂಟೆ ತಡವಾಗಿ ಆರಂಭವಾಗಿದೆ. ಈ ವೇಳೆ ಪರೀಕ್ಷಾ ಕೇಂದ್ರದಲ್ಲೇ ಪ್ರಶ್ನೆ ಮಾಡಿದಕ್ಕೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಧಮ್ಕಿ ಹಾಕಿದ್ದಾರೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿದರು.
ಯಾರದೊ ಪರೀಕ್ಷೆಯನ್ನು ಯಾರದೊ ಕೈಯಲ್ಲಿ ಬರೆಸುತ್ತಿದ್ದಾರಾ ಎಂದು ಅನುಮಾನ ಶುರುವಾಗಿದೆ. ಕಾರಣ ಪ್ರವೇಶ ಪತ್ರದಲ್ಲಿರುವ ಸಂಖ್ಯೆ ಪರೀಕ್ಷಾರ್ಥಿಗಳಿಗೆ ನೀಡಲಾಗಿದ್ದ ಒಎಂಆರ್ ಶೀಟ್‌ನಲ್ಲೂ ಇರಬೇಕು. ಆದರೆ, ಪ್ರವೇಶ ಪತ್ರದ ಸಂಖ್ಯೆ ಒಎಂಆರ್ ಶ್ರೀಟ್‌ನಲ್ಲಿ ಇರಲಿಲ್ಲ. ಇದನ್ನು ಪ್ರಶ್ನೆ ಮಾಡಿದಾಗ ಪರೀಕ್ಷಾ ಕೇಂದ್ರದ ಸಿಬ್ಬಂದಿ ಅದನ್ನು ಸರಿ ಮಾಡಿಕೊಂಡು ಬರೆಯಿರಿ ಇಲ್ಲಾ ಎದ್ದು ಹೋಗಿ ಎಂದು ಉಡಾಫೆಯ ಉತ್ತರ ನೀಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ.
ಬೆಳಿಗ್ಗೆ 10ಗಂಟೆಯಿಂದ 12ಗಂಟೆವರೆಗೂ ನಡೆದ ಪರೀಕ್ಷೆ ನಂತರ ಪರೀಕ್ಷೆ ನಂತರ ಪರೀಕ್ಷಾ ಕೇಂದ್ರದಿಂದ ಹೊರ ಬಂದ ಪರೀಕ್ಷಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೆಪಿಎಸ್‌ಸಿ ಈ ಬಾರಿಯೂ ಎಡವಟ್ಟು ಮಾಡಿದ್ದು ಸರಿಯಾದ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ನಾಲ್ಕೈದು ಪರೀಕ್ಷಾ ಕೇಂದ್ರಗಳಲ್ಲಿ ಇದೇ ಸಮಸ್ಯೆ ಆಗಿದ್ದು ನೂರಾರು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಸಮಸ್ಯೆಯನ್ನು ಆಲಿಸುವ ಯಾರೊಬ್ಬ ಅಧಿಕಾರಿಗಳು ಇಲ್ಲದ ಕಾರಣ ಪರೀಕ್ಷಾರ್ಥಿಗಳು ನಮಗೆ ಅನ್ಯಾಯವಾಗಿದೆ ಮರು ಪರೀಕ್ಷೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Previous articleಪತಿ ಮನೆಯವರ ಕಿರುಕುಳ: ನೇಣು ಬಿಗಿದು ವಿವಾಹಿತೆ ಆತ್ಮಹತ್ಯೆ
Next articleಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆಗೆ ಶರಣು